ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಮರಳಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತಾಬಿಬಾನ್ ಉಗ್ರರ ಅಟ್ಟಹಾಸಕ್ಕೆ ಮಿತಿ ಇಲ್ಲದಂತಾಗಿದೆ. ಇದೀಗ ಈ ಉಗ್ರರ ಮತ್ತೊಂದು ಕ್ರೌರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋದಲ್ಲಿ ಏನಿದೆ ?
ಅಫ್ಘಾನಿಸ್ತಾನದ ಯೋಧನ ಶಿರಚ್ಛೇದ ಮಾಡಿದ ತಾಲಿಬಾನ್ ಉಗ್ರರು, ಅದನ್ನು ಕೈಯಲ್ಲಿ ಹಿಡಿದುಕೊಂಡು ಸಂಭ್ರಮಾಚರಣೆ ಮಾಡಿದ್ದಾರೆ. ಸೈನಿಕರ ರುಂಡವನ್ನು ಹಿಡಿದು, ತಮ್ಮ ನಾಯಕ ಹಿಬತುಲ್ಲಾ ಅಖುಂದ್ಜಡಾನ ಹೆಸರು ಕೊಂಡಾಡಿದ್ದಾರೆ. ಈ ಕ್ರೌರ್ಯದ ವಿಡಿಯೋ ತಾಲಿಬಾನ್ ಗಳು ಬಳಸುವ ಖಾಸಗಿ ಮಾಧ್ಯಮದಲ್ಲಿ ಹರಿದಾಡುತ್ತಿದೆ.
PublicNext
12/09/2021 09:08 pm