ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಫ್ಘಾನ್‌ನಲ್ಲಿ ತಾಲಿಬಾನ್ ಆಡಳಿತಕ್ಕೆ ವಿಶ್ವಸಂಸ್ಥೆ ಅಭಯ.!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆಡಳಿತಕ್ಕೆ ವಿಶ್ವಸಂಸ್ಥೆ ಅಭಯ ನೀಡಿತೇ ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ತಾಲಿಬಾನ್ ವಕ್ತಾರ ಮೊಹಮದ್ ನಯೀಂ ಟ್ವೀಟ್ ಪುಷ್ಟಿ ನೀಡಿದೆ.

ಮೊಹಮದ್ ನಯೀಂ ಟ್ವೀಟ್ ಮಾಡಿ, "ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಾರ್ಟಿನ್ ಗ್ರಿಫ್ತಾಸ್ ಅವರನ್ನು ತಾಲಿಬಾನ್ ನಾಯಕ ಮುಲ್ಲಾ ಅಬ್ದುಲ್ ಘನಿ ಭಾರದಾರ್ ಭಾನುವಾರ ಭೇಟಿಯಾಗಿದ್ದಾರೆ. ಅಫ್ಘಾನಿಸ್ತಾನ ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ವಿಶ್ವಸಂಸ್ಥೆ ನೆರವಾಗಲಿದೆ ಎಂದು ಬಾರದಾರ್ ಅವರಿಗೆ ಗ್ರಿಫ್ತಾಸ್ ಭರವಸೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರವನ್ನು ವಶಪಡಿಸಿಕೊಂಡು 20 ದಿನಗಳು ಕಳೆದರೂ ತಾಲಿಬಾನ್ ಹೋರಾಟಗಾರರಿಗೆ ಈವರೆಗೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ಅಫ್ಘಾನಿಸ್ತಾನ ವಶಪಡಿಸಿಕೊಳ್ಳುವಲ್ಲಿ ತಾಲಿಬಾನಿಗಳ ಬೆನ್ನಿಗೆ ನಿಂತಿದ್ದ ಪಾಕಿಸ್ತಾನದ ಪ್ರಭಾವಿ ಹಖ್ಖಾನಿ ನೆಟ್​ವರ್ಕ್​ ಜೊತೆಗೆ ಅಧಿಕಾರ ಹಂಚಿಕೆ ಮಾತುಕತೆಯಲ್ಲಿ ತಾಲಿಬಾನ್​ಗೆ ಯಶಸ್ಸು ಸಿಗುತ್ತಿಲ್ಲ. ಈ ನಡುವೆ ಎರಡೂ ಗುಂಪುಗಳ ನಡುವೆ ಈಚೆಗೆ ಸಂಘರ್ಷ ನಡೆದಿದ್ದು, ತಾಲಿಬಾನ್​ನ ಸುಪ್ರೀಂ ಕಮಾಂಡರ್​ ಮುಲ್ಲಾ ಅಬ್ದುಲ್ ಘನಿ ಬಾರದಾರ್​ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪಾಕಿಸ್ತಾನಕ್ಕೆ ಕರೆದೊಯ್ಯಲಾಗಿದೆ ಎಂದು ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Edited By : Vijay Kumar
PublicNext

PublicNext

06/09/2021 11:23 am

Cinque Terre

156.87 K

Cinque Terre

2