ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ 7.2 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಈವರೆಗೂ 304 ಜನ ಸಾವನ್ನಪ್ಪಿದ್ದಾರೆ ಅಂತ ದೇಶದ ನಾಗರೀಕ ಸಂರಕ್ಷಣಾ ತಂಡ ಮಾಹಿತಿ ನೀಡಿದೆ.
ಸುನಾಮಿ ಏಳುವ ಭೀತಿಯೂ ಸೃಷ್ಟಿಯಾಗಿದ್ದು, ಭೂಕಂಪದ ತೀವ್ರತೆಗೆ ನೂರಾರು ಕಟ್ಟಡಗಳು ನೆಲಸಮವಾಗಿದೆ. ಸಂರಕ್ಷಣಾ ತಂಡ ಈಗಾಗಲೇ ಕಾರ್ಯಾಚರಣೆ ನಡೆಸುತ್ತಿದ್ದು, ಕಡಲ ತೀರದಲ್ಲಿ ವಾಸಿಸುತ್ತಿರುವವರನ್ನು ಸ್ಥಳಾಂತರ ಮಾಡಲಾಗಿದೆ ಅಂತ ವಿಪತ್ತು ನಿರ್ವಹಣಾ ತಂಡ ಮಾಹಿತಿ ನೀಡಿದೆ.
ಭೂಕಂಪವಾಗುತ್ತಿದ್ದಂತೆಯೇ ಎಲ್ಲರೂ ತಮ್ಮ ತಮ್ಮ ಮನೆಗಳನ್ನು ಬಿಟ್ಟು ಹೊರಗೆ ಓಡೋಡಿ ಬಂದಿದ್ದಾರೆ. ಆದರೆ ಮನೆಯಲ್ಲೇ ಇದ್ದವರು ಅವಶೇಷಗಳಡಿ ಸಿಲುಕಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ.
PublicNext
15/08/2021 09:06 am