ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತ್ತೆ ರೀ ಎಂಟ್ರಿ ಕೊಡುತ್ತೇನೆ ಟ್ರಂಪ್ ಶಪಥ

ವಾಷಿಂಗ್ಟನ್ : ಅಮೆರಿಕಾದ 46 ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವೇಳೆ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

'ನಾಲ್ಕು ವರ್ಷಗಳು ಅತ್ಯದ್ಭುತವಾಗಿದ್ದವು' ಎಂದು ಫ್ಲೊರಿಡಾಕ್ಕೆ ತೆರಳಲು ವಿಮಾನವೇರುವ ಮುನ್ನ ವಾಷಿಂಗ್ಟನ್ ನ ಹೊರವಲಯದಲ್ಲಿ ಉದ್ಯೋಗಿಗಳು, ಬೆಂಬಲಿಗರು ಹಾಗೂ ಕುಟುಂಬದವರನ್ನು ಉದ್ದೇಶಿಸಿ ಅವರು ಹೇಳಿದ್ದಾರೆ.

'ನಾವು ಜತೆಯಾಗಿ ಸಾಧಿಸಿದ್ದೇವೆ. ನಾನು ಯಾವಾಗಲೂ ನಿಮಗಾಗಿ ಹೋರಾಡುತ್ತೇನೆ. ಬೇರೆ ರೀತಿಯಲ್ಲಿ ಶೀಘ್ರದಲ್ಲೇ ಮರಳಲಿದ್ದೇನೆ' ಎಂದು ಅವರು ಹೇಳಿದ್ದಾರೆ. ಬೈಡನ್ ಹೆಸರು ಪ್ರಸ್ತಾಪಿಸದ ಅವರು, ಹೊಸ ಆಡಳಿತಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದ್ದಾರೆ.

Edited By : Nirmala Aralikatti
PublicNext

PublicNext

21/01/2021 09:04 am

Cinque Terre

56.23 K

Cinque Terre

6

ಸಂಬಂಧಿತ ಸುದ್ದಿ