ಜಕಾರ್ತ: ಒಟ್ಟು 62 ಜನರನ್ನು ಹೊತ್ತು ಪ್ರಯಾಣ ಆರಂಭಿಸಿದ ಇಂಡೊನೇಷ್ಯಾ ವಿಮಾನವು ಜಾವಾ ಸಮುದ್ರದಲ್ಲಿ ಪತನಗೊಂಡಿದ್ದು, ಮೃತದೇಹ, ಬಟ್ಟೆ ಪತ್ತೆಯಾಗಿವೆ.
ವಿಮಾನದ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿಗೆ ಮನುಷ್ಯರ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ಭಾನುವಾರ ಬೆಳಗ್ಗೆ ದೊರೆತಿವೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಇಂಡೊನೇಷ್ಯಾ ರಾಷ್ಟ್ರೀಯ ರಕ್ಷಣಾ ಸಂಸ್ಥೆಯು, 'ಜಾವಾ ಸಮುದ್ರದಲ್ಲಿ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ದೊರೆತಿವೆ. ಈ ತುಣುಕುಗಳು ಲಂಕಾಂಗ್ ದ್ವೀಪ ಮತ್ತು ಲಕಿ ದ್ವೀಪದ ನಡುವೆ ಪತ್ತೆಯಾಗಿವೆ' ಎಂದು ಮಾಹಿತಿ ನೀಡಿದೆ.
ಭಾರಿ ಮಳೆಯ ಕಾರಣ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಶ್ರೀವಿಜಯ ಏರ್ ಏರ್‌ಲೈನ್ ಕಂಪನಿಯ ವಿಮಾನವೊಂದು ಟೇಕ್‌ಆಫ್ ಆಗಿತ್ತು. ಆದರೆ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಇದ್ದರು.
PublicNext
10/01/2021 09:01 am