ತೆಹ್ರಾನ್ (ಇರಾನ್) : ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸದ ಕಾರಣಕ್ಕಾಗಿ ಇರಾನ್ನಲ್ಲಿ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿ, ವ್ಯಾನ್ನಲ್ಲಿ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಮೃತಪಟ್ಟಿದ್ದಳು. ಈ ಘಟನೆ ನಂತರ ಇರಾನ್ನಲ್ಲಿ ಬಲವಂತದ ಹಿಜಾಬ್' ವಿರುದ್ಧ ಜನರು ಬೀದಿಗಿಳಿದಿದ್ದಾರೆ. ಈ ನಡುವೆ ಇರಾನ್‌ನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಜನರ ಗಮನ ಸೆಳೆಯುತ್ತಿದೆ.
ಇಂತಹ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಕಿರಿಕ್‌ಗೆ ಮುಂದಾಗಿದ್ದು, ಹಿಜಾಬ್ ಪ್ರಶ್ನಿಸಲು ಹೋಗಿ ಜನರ ಗುಂಪಿನಿಂದ ಸಕತ್ ಒದೆತಿಂದಿದ್ದಾನೆ. ಪತ್ರಕರ್ತರೊಬ್ಬರು ಹಂಚಿಕೊಂಡ ಈ ವಿಡಿಯೋದಲ್ಲಿ, ಪುರುಷನೊಬ್ಬ ತನ್ನ ಬೈಕ್‌ನಿಂದ ಇಳಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಹಿಜಾಬ್‌ನ್ನು ಸರಿಯಾಗಿ ಧರಿಸದಿದ್ದಕ್ಕಾಗಿ ಏಕಾಏಕಿ ಹೋಗಿ ಕಪಾಳಮೋಕ್ಷ ಮಾಡಿದ್ದಾನೆ.
ನಂತರ ಆ ವ್ಯಕ್ತಿ ತನ್ನ ಬೈಕ್‌ನಲ್ಲಿ ಹಿಂತಿರುಗಿ ಹೋಗುತ್ತಿದ್ದಾಗ, ಅಲ್ಲಿದ್ದ ಗುಂಪು ಅವನನ್ನು ನಿಲ್ಲಿಸಿ, ಹಿಗ್ಗಾಮುಗ್ಗಾ ಥಳಿಸಿದ್ದಾರೆ..ಇದೀಗ ಈ ವಿಡಿಯೋ ಸಕತ್ ವೈರಲ್ ಆಗುತ್ತಿದ್ದು, ಈ ಸಂಗತಿ ನೋಡಿದ ಜನ ಇರಾನ್ ಜನರು ಬದಲಾಗುತ್ತಿದ್ದಾರಾ ಎಂಬ ಮಾತುಗಳು ಕೇಳಿಬರುತ್ತಿವೆ..
PublicNext
23/09/2022 10:26 pm