ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ನ ಎಟಿಎಂವೊಂದಕ್ಕೆ ಅಡಿಯಿಟ್ಟ ಮಹಿಳೆ, ಮೊಸಳೆಯನ್ನು ಕಂಡು ಬೆಚ್ಚಿಬಿದ್ದಿರುವ ಘಟನೆ ನಡೆದಿದೆ. ಮಕರದಿಂದ ಭಯಗೊಂಡ ಆಕೆ ತಕ್ಷಣವೇ ಪೊಲಿಸರಿಗೆ ಕರೆ ಮಾಡಿದಳು. ಪೊಲೀಸರು ವನ್ಯಜೀವಿ ವನ್ಯಜೀವಿ ಇಲಾಖೆ ಅಧಿಕಾರಿಗಳು ತಂಡದೊಂದಿಗೆ ಬಂದು ಮೂರೂವರೆ ಅಡ್ಡಿ ಉದ್ದದ ಮೊಸಳೆಯನ್ನು ಹಿಡಿದು ಸ್ಥಳಾಂತರಿಸಿದ್ದಾರೆ.
ಈ ಘಟನೆ ಲೇಕ್ ವರ್ತ್‌ನ ಟೆಲಿಫೋನ್ ಬ್ಲಾಕ್‌ನಲ್ಲಿ ಆ.31ರಂದು ಸಂಭವಿಸಿದೆ. ಮಹಿಳೆ ಎಟಿಎಂನಿಂದ ಹಣ ಡ್ರಾ ಮಾಡುವಾಗ ಏನೋ ಶಬ್ದ ಕೇಳಿ ಆ ಕಡೆ ತಿರುಗಿ ನೋಡಿದ್ದಾಳೆ. ತಕ್ಷಣ ಮೊಸಳೆ ಕಂಡು ಕಾಲನ್ನು ಹಿಂತೆಗೆದುಕೊಂಡು ಎಟಿಎಂನಿಂದ ಹೊರಗೆ ಬಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಮುಟ್ಟಿಸಿದಳು.
ಮೊಸಳೆ ಹಿಡಿಯುವ ದೃಶ್ಯ ಎಂಟಿಎಂನಲ್ಲಿದ್ದ ಬಾಡಿಕ್ಯಾಮೆರಾದಲ್ಲಿ ಚಿತ್ರಿತವಾಗಿ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ‘ಕ್ರಿಕಿ ಮೊಸಳೆ ಕಸ್ಟಡಿಯಲ್ಲಿದೆ’ ಎಂದು ಶೀರ್ಷಿಕೆ ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
PublicNext
07/09/2022 07:44 pm