ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಗನಯಾನಿಗಳಿಗೆ ಸೆಕ್ಸ್ ಆಫರ್ : ಗಗನಸಖಿಯ ಮಾದಕ ರಹಸ್ಯ ವೈರಲ್!

ಲಂಡನ್: ವಿಮಾನ ಯಾನ ಮಾಡುವವರಿಗೆ ಉತ್ತಮ ವ್ಯವಸ್ಥೆ ಕಲ್ಪಿಸುವುದು ಗಗನಸಖಿಗಳ ಕಾರ್ಯ.

ಆದರೆ ಬ್ರಿಟಿಷ್ ಏರ್ ವೇಸ್ ನ ಗಗನಸಖಿಯೊಬ್ಬಳು ವಿಮಾನ ಹಾರಾಟದ ನಡುವೆಯೇ ಸೆಕ್ಸ್ ಮಾರಾಟ ಮಾಡುವುದಾಗಿ ಹೇಳಿದ್ದು, ಮೈಲ್ ಹೈ ಕ್ಲಬ್ (ವಿಮಾನದಲ್ಲಿ ಸೆಕ್ಸ್ ದಂಧೆ ನಡೆಸುವ ಅನಧಿಕೃತ ಗ್ರೂಪ್)ಗೆ ಸೇರಿಕೊಳ್ಳಬಹುದು ಎಂದು ಗ್ರಾಹಕರಿಗೆ ಆಫರ್ ಮಾಡಿದ್ದಾಳೆ.

ಫೇಸ್ ಬುಕ್ ಪೇಜ್ ನಲ್ಲಿ ವಿಮಾನದ ಒಳಗೆ ತೆಗೆದಿರುವ ತನ್ನದೇ ಕೆಲವೊಂದು ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿಕೊಂಡ ಗಗನಸಖಿ ಪ್ರೀತಿಯ ಪ್ರಯಾಣಿಕರೇ ನಾನು ನಿಮ್ಮ ವಿಮಾನ ಮನರಂಜಕ. ನಾನು ಏನು ಮಾಡಬೇಕೆಂದು ನೀವು ಬಯಸುತ್ತೀರಿ? ಎಂದು ಚಿತ್ರಕ್ಕೆ ಅಡಿಬರಹ ನೀಡಿದ್ದಾಳೆ.

ಅನಾಮಧೇಯ ಗಗನಸಖಿ ದಿ ಸನ್ ವೆಬ್ಸೈಟ್ ಜತೆ ಮಾತನಾಡಿದ್ದು, ತಾನು ಬ್ರಿಟಿಷ್ ಏರ್ ವೇಸ್ ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

ನನ್ನ ಒಂದೊಂದು ಸೇವೆಗಳಿಗೂ ಪ್ರತ್ಯೇಕ ಹಣವನ್ನು ತೆಗೆದುಕೊಳ್ಳುತ್ತೇನೆಂದು ಮುಕ್ತವಾಗಿ ಹೇಳಿದ್ದಾಳೆ.

ಹಣ ನೀಡುವುದಾದರೆ ವಯಸ್ಕ ಮನರಂಜನೆಯನ್ನು ನೀಡುತ್ತೇನೆಂದು ಆಫರ್ ಮಾಡಿದ್ದಾಳೆ.

ಕೇವಲ ಗ್ರಾಹಕರೊಂದಿಗೆ ಮಾತ್ರವಲ್ಲ ತನ್ನ ಸಹವರ್ತಿ ಸದಸ್ಯರು, ಪೈಲಟ್ ರೊಂದಿಗೂ ಸಮಯ ಕಳೆದಿರುವುದಾಗಿ ತಿಳಿಸಿದ್ದಾಳೆ.

ಇನ್ನು ಜಾಲತಾಣದಲ್ಲಿ ಗಗನಸಖಿಯ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಬ್ರಿಟಿಷ್ ಏರ್ ವೇಸ್, ನಮ್ಮ ಎಲ್ಲ ಸಹೋದ್ಯೋಗಿಗಳಿಂದ ಎಲ್ಲ ಸಮಯದಲ್ಲೂ ಉನ್ನತ ಮಟ್ಟದ ನಡವಳಿಕೆಯನ್ನು ನಾವು ನಿರೀಕ್ಷಿಸುತ್ತೇವೆ.

ಹೀಗಾಗಿ ಇದರ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದಿದೆ.

Edited By : Nirmala Aralikatti
PublicNext

PublicNext

29/11/2020 01:13 pm

Cinque Terre

45.17 K

Cinque Terre

3