ವಾಷಿಂಗ್ಟನ್ : ಭಾರಿ ಪೈಪೋಟಿಯಿಂದ ಕೂಡಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯು ದೇಶಾದ್ಯಂತ ಹಿಂಸಾಚಾರದ ಆತಂಕದ ಅಲೆಯನ್ನು ಸೃಷ್ಟಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶ್ವೇತ ಭವನ, ಪ್ರಮುಖ ವಾಣಿಜ್ಯ ಕಟ್ಟಡಗಳು ಸೇರಿದಂತೆ ಹಲವೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಅಮೆರಿಕದಲ್ಲಿ ನಡೆಯುತ್ತಿರುವ 2020ರ ಚುನಾವಣೆಯನ್ನು ಇಲ್ಲಿನ ಇತಿಹಾಸದ ಅತ್ಯಂತ ವಿಭಜನಕಾರಿ ಚುನಾವಣೆ ಎಂದು ಹೇಳಲಾಗಿದೆ.
ಟ್ರಂಪ್, ಬೈಡೆನ್ ನಡುವೆ ತೀವ್ರ ಪೈಪೋಟಿ
ಅಧ್ಯಕ್ಷೀಯ ಅಭ್ಯರ್ಥಿಗಳಾದ ಟ್ರಂಪ್ ಹಾಗೂ ಬೈಡೆನ್ ನಡುವೆ ತೀವ್ರ ಪೈಪೋಟಿ ಏರ್ಪಡಿಸಿದೆ.
ಅನೇಕ ಸಮೀಕ್ಷೆಗಳಲ್ಲಿ ಬೈಡನ್ ಮುನ್ನಡೆ ಸಾಧಿಸಿದ್ದಾರೆ.
ಟ್ರಂಪ್, ಬೈಡೆನ್ ಭವಿಷ್ಯ ರಾತ್ರಿ ವೇಳೆಗೆ ನಿಚ್ಚಳ?
ಅಮೆರಿಕದ ವಿವಿಧೆಡೆ ಸಮಯವಲಯ ಬದಲಾಗುತ್ತದೆ. ಹೀಗಾಗಿ ಆಯಾ ಭಾಗದ ಸಮಯಕ್ಕೆ ಅನುಗುಣವಾಗಿ ಬೆಳಗ್ಗೆ 6ರಿಂದಲೇ ಮತದಾನ ಆರಂಭವಾಗಿದೆ.
ಬೆಳಗ್ಗೆಯಿಂದಲೇ ಮತದಾರರು ಮತ ಚಲಾವಣೆ ಮಾಡಿದ್ದಾರೆ. ರಾತ್ರಿ (ಭಾರತೀಯ ಕಾಲಮಾನ ಬೆಳಗಿನ ಜಾವ) ಮುಕ್ತಾಯವಾಗಲಿದೆ.
ಕೂಡಲೇ ಮತ ಎಣಿಕೆ ಆರಂಭವಾಗಲಿದ್ದು, ಇಂದು ಮಧ್ಯಾಹ್ನದ ವೇಳೆ ಅಮೆರಿಕದ ಮುಂದಿನ ಅಧ್ಯಕ್ಷರು ಯಾರು ಎಂಬುವುದು ತಿಳಿಯಲಿದೆ.
PublicNext
04/11/2020 08:04 am