ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು :ಕೆಪಿಟಿಸಿಎಲ್ ಎಚ್ಚೆತ್ತುಕೊಳ್ಳದಿದ್ದರೆ ಆಗಲಿದೆ ದೊಡ್ಡ ಅನಾಹುತ.!

ಕೊರಟಗೆರೆ: ತಾಲೂಕು ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಕೀರಪ್ಪನ ಪಾಳ್ಯ ಗ್ರಾಮದ ಹಳ್ಳದ ದಡದಲ್ಲಿ ಇರುವ ಹೈಟೆನ್ಷನ್ ವೈರ್ ಟವರ್ ಸಂಪೂರ್ಣ ಕೊರೆಯುತ್ತಿದ್ದು ಹೈಟೆನ್ಷನ್ ವಿದ್ಯುತ್ ಕಂಬ ಧರೆಗುರುಳುವ ಸ್ಥಿತಿ ನಿರ್ಮಾಣವಾಗಿದೆ.

ಈ ಬಗ್ಗೆ ರೈತರು ಮಾಹಿತಿ ನೀಡಿದರು ಸಹ ಕೆಪಿಟಿಸಿಎಲ್ ಆಗಲಿ ಅಥವಾ ಬೆಸ್ಕಾಂ ಇಲಾಖೆಯ ಅಧಿಕಾರಿಗಳಾಗಲೀ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ, ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಸಂಬಂಧಪಟ್ಟಂತಹ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಮುಂದೆ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಧಿಕಾರಿಗಳು ಯಾವ ರೀತಿಯ ಕ್ರಮವನ್ನ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್

Edited By :
PublicNext

PublicNext

04/08/2022 08:14 pm

Cinque Terre

25.42 K

Cinque Terre

0

ಸಂಬಂಧಿತ ಸುದ್ದಿ