ಹಾವೇರಿ: ಬಸ್ ಪಾಸ್ ವಿತರಣೆಯಲ್ಲಿ ಅಧಿಕಾರಿಗಳ ವಿಳಂಬ ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕಾಲೇಜು ಪ್ರಾರಂಭವಾದರೂ ವಿದ್ಯಾರ್ಥಿಗಳಿಗೆ ಬಸ್ ಪಾಸ್ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆಂದು ನಗರದ ಬಸ್ ನಿಲ್ದಾಣದಲ್ಲಿ ಎಸ್ಎಫ್ಐ ಸಂಘಟನೆ ನೇತೃತ್ವದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪಾಸ್ ವಿತರಣೆ ಮಾಡುತ್ತಿಲ್ಲ, ಇದರಿಂದ ಪ್ರತಿದಿನ ಟಿಕೆಟ್ ಗೆ ಹಣಕೊಟ್ಟು ಓಡಾಡುವಂತಾಗಿದೆ. ಇದರಿಂದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದರು.
PublicNext
21/07/2022 06:25 pm