ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ : ಜೆಸಿಬಿ ಘರ್ಜನೆ, ನ್ಯಾಯಕ್ಕಾಗಿ ಅಂಗಲಾಚಿದ ಪರಿಶಿಷ್ಟ ಕುಟುಂಬಗಳು

ವರದಿ - ಸಂತೋಷ ಬಡಕಂಬಿ

ಬೆಳಗಾವಿ : ಮನೆ ಕಳೆದುಕೊಂಡ ಪರಿಶಿಷ್ಟ ಜಾತಿಯ ಬಡ ಕುಟುಂಬಗಳಿಗೆ ಜಿಲ್ಲಾಡಳಿತದಿಂದ ಪರಿಹಾರ ಹಾಗೂ ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದ ಭಜಂತ್ರಿ ಕುಟುಂಬಸ್ಥರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೈಲಹೊಂಗಲ ತಾಲೂಕಿನ ವಣ್ಣೂರು ಗ್ರಾಮದಲ್ಲಿ ಭಜಂತ್ರಿ ಕುಟುಂಬ ಬಹಳ ವರ್ಷಗಳಿಂದ ವಾಸ ಮಾಡಿಕೊಂಡಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಉತಾರ ಸಹ ಇದೆ. ಅಲ್ಲದೆ ಪ್ರತಿ ವರ್ಷ ಮನೆಯ ಘರಪಟ್ಟಿಯನ್ನು ತುಂಬುತ್ತಾ ಬಂದಿದ್ದೇವೆ. ಮಾಲೀಕರು ನಾವೆ ಇರುವಾಗ ಗ್ರಾಮ ಪಂಚಾಯತಿ ಅಧಿಕಾರಿ ರಸ್ತೆಯ ಪಕ್ಕ ಇದ್ದ ಮನೆಯ ನಮ್ಮನ್ನು ಕರೆದು ಯಾವುದೇ ಪರಿಹಾರ ನೀಡದ ನೋಟಿಸ್ ನೀಡಿ ರಸ್ತೆ ಅಗಲೀಕರಣ ಮಾಡಿದ್ದಾರೆ ಎಂದು ಮವಿಯಲ್ಲಿ ದೂರಿದ್ದಾರೆ.

ಕಸದ ಬುಟ್ಟಿ, ಕಸಬರಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುವ ನಮ್ಮ ಕುಟುಂಬಕ್ಕೆ ಮನೆ ನಿರ್ಮಿಸಿಕೊಳ್ಳಲು ಯಾವುದೇ ರೀತಿ ಜಾಗೆ ಇಲ್ಲ. ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ನಮಗೆ ಶಾಶ್ವತ ಸೂರು ಕಲ್ಪಿಸಿ ಪರಿಹಾರ ಕೊಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಆನಂದ ಭಜಂತ್ರಿ, ಲಕ್ಕಪ್ಪ ಭಜಂತ್ರಿ, ಮಲ್ಲಿಕಾರ್ಜುನ ಭಜಂತ್ರಿ, ಹನುಮಂತ ಭಜಂತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

18/07/2022 11:04 pm

Cinque Terre

41.08 K

Cinque Terre

1

ಸಂಬಂಧಿತ ಸುದ್ದಿ