ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಗ್ರಾ.ಪಂ ನಿರ್ಲಕ್ಷ್ಯದಿಂದ ಕತ್ತಲಲ್ಲಿರುವ ಅಂಬೇಡ್ಕರ್ ಕಾಲೋನಿ!

ಕೊರಟಗೆರೆ: ಬಹುತೇಕ ದಲಿತ ಸಮುದಾಯವೇ ಇರುವಂತಹ ಅಂಬೇಡ್ಕರ್ ಕಾಲೋನಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ದೀಪವಿಲ್ಲದೆ ಕತ್ತಲಿನಲ್ಲಿ ಸೊರಗಿದೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಬೇಡ್ಕರ್ ಕಾಲೋನಿಯ ಇದ್ದೂ ಇಲ್ಲದಂತಾದ ಬೀದಿ ದೀಪಗಳು ಇಲ್ಲಿವೆ. ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳಿಗೆ ಸಮಸ್ಯೆಯ ಬಗ್ಗೆ ಎಷ್ಟೇ ಮನವರಿಕೆ ಮಾಡಿದರೂ, ಒಂದು ವಾರದಿಂದ ಕೆಟ್ಟು ಹೋಗಿರುವ ಬೀದಿ ದೀಪಗಳನ್ನು ಅಳವಡಿಸದೆ ಬೇಜವಾಬ್ದಾರಿ ತೋರಿದ್ದಾರೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿಗೆ ಸಮಯಕ್ಕೆ ಬರದೇ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದು, ಗ್ರಾಮ ಪಂಚಾಯಿತಿ ಆಡಳಿತ ಯಂತ್ರವೇ ನಿಷ್ಕ್ರಿಯಗೊಂಡಿದೆ.

ಗ್ರಾಮ ಪಂಚಾಯಿತಿಯಲ್ಲಿ ಪಿಡಿಒ ಕರ್ತವ್ಯ ನಿರ್ವಹಿಸುತ್ತಿರುವುದು ಬಹುತೇಕ ಗ್ರಾಮ ವಾಸಿಗಳಿಗೆ ಗೊತ್ತಿಲ್ಲ. ಒಮ್ಮೆಯೂ ಜನಸಾಮಾನ್ಯರ ಕೆಲಸಗಳನ್ನು ಮಾಡಿಲ್ಲ. ಜನಪ್ರತಿನಿಧಿಗಳು ಸಹ ಪಿಡಿಒ ರೀತಿಯೇ ವರ್ತಿಸುತ್ತಿದ್ದಾರೆ ಎಂಬುದು ಗ್ರಾಮದ ಕೆಲವು ಪ್ರಜ್ಞಾವಂತರ ಅಭಿಪ್ರಾಯವಾಗಿದೆ. ಇನ್ನಾದರೂ ಗ್ರಾಮ ಪಂಚಾಯಿತಿ ಸೂಕ್ತ ರೀತಿಯಲ್ಲಿ ವಿದ್ಯುದ್ ‌ದೀಪ ವ್ಯವಸ್ಥೆ ಮಾಡಿಕೊಡಬೇಕು ಎಂದು ಅಂಬೇಡ್ಕರ್ ಕಾಲೋನಿ ವಾಸಿಗಳು ಪಬ್ಲಿಕ್ ನೆಕ್ಸ್ಟ್‌ಗೆ ಮನವಿ ಮಾಡಿದ್ದಾರೆ.

Edited By : Vijay Kumar
PublicNext

PublicNext

17/07/2022 10:14 pm

Cinque Terre

16.42 K

Cinque Terre

0

ಸಂಬಂಧಿತ ಸುದ್ದಿ