ಹಾವೇರಿ : ಸುತ್ತಲೂ ನೀರು ಕೆರೆಯ ಆಚೆಗೆ ನೂರಾರು ಎಕರೆ ಹೊಲ ಈ ಹೊಲಗಳಿಗೆ ತೆರಳಬೇಕಾದರೆ ದೋಣಿಯಲ್ಲಿ ಹೋಗಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಶಿಡ್ಲಾಪುರ ಗ್ರಾಮದಲ್ಲಿ ಈ ಗ್ರಾಮದಲ್ಲಿ ಹುಲಿಕಟ್ಟಿ ಹಾಗೂ ಶಿಡ್ಲಾಪುರ ಸರಹದ್ದಿನಲ್ಲಿರುವ ಡೊಂಕನ ಕೆರೆ ಕೋಡಿ ಬಿದ್ದರೆ ಇಲ್ಲಿನ ರೈತರಿಗೆ ಸಂಕಷ್ಟ ತಪ್ಪಿದ್ದಲ್ಲ ತಮ್ಮ ಹೊಲಗಳಿಗೆ ತೆರಳಲು ಒಂದು ಸಣ್ಣ ಸೇತುವೆ ಮಾಡಿಕೊಡಿ ಎಂದು ಇಲ್ಲಿನ ಗ್ರಾಮಸ್ಥರು ಕಳೆದ 10 ವರ್ಷದಿಂದ ಬೇಡಿಕೆಯಿಟ್ಟಿದ್ದಾರೆ ಆದರೆ ಇದುವರೆಗೂ ಯಾವುದೇ ಸೇತುವೆ ನಿರ್ಮಾಣವಾಗಿಲ್ಲ.
ಸದ್ಯ ರೈತರು ಹೊಲಗಳಿಗೆ ತೆರಳಬೇಕಾದರೆ ತೆಪ್ಪದ ಮೂಲಕ ಸಾಗಬೇಕಾದ ಸಂದಿಗ್ಧತೆ ಬಂದೊದಗಿದೆ. ಇನ್ನು ಕೃಷಿಗೆ ಬೇಕಾದ ಗೊಬ್ಬರ ಹಾಗೂ ಇತರೆ ಸಾಮಗ್ರಿಗಳನ್ನು ತೆಪ್ಪದಲ್ಲಿ ತೆಗೆದುಕೊಂಡು ಹೋಗುವುದು ಅಸಾಧ್ಯವಾಗಿದೆ. ತೆಪ್ಪ ತೆಲುವ ಬದಲು ಮುಳುಗಿದರೆ ಭಾರೀ ಅನಾಹುತವೇ ಸಂಭವಿಸಲಿದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಅನ್ನದಾತರಿಗೆ ಅನುಕೂಲವಾಗುವ ವಾತಾವರಣ ನಿರ್ಮಿಸಬೇಕಿದೆ.
PublicNext
16/07/2022 06:29 pm