ಬೆಂಗಳೂರು: ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿ ಹಾಗೂ ಬೆಂಗಳೂರು ಫ್ಲೈಓವರ್ ಟೋಲ್ ಸುಂಕವನ್ನ NHIA ಶೇಕಡ 25 ರಷ್ಟು ಹೆಚ್ಚಳ ಮಾಡಿದೆ. ಇದರಿಂದ ದ್ವೀಚಕ್ರ ವಾಹನ ಸವಾರರ ಟೋಲ್ ಸುಂಕ ಐದು ರೂಪಾಯಿ ಈಗ ಹೆಚ್ಚಳವಾಗಿದೆ.
ಜೂನ್-30 ನಿನ್ನೆವರೆಗೂ ದ್ವೀಚಕ್ರವಾಹನ ಸವಾರರು 20 ರೂಪಾಯಿ ಟೋಲ್ ನೀಡುತ್ತಿದ್ದರು. ಆದರೆ, ಜುಲೈ-01 ರಿಂದ 25 ರೂಪಾಯಿ ಟೋಲ್ ನೀಡಬೇಕಾಗಿದೆ. ಸಿಂಗಲ್ ಟಿಕೆಟ್ ಗೆ 25 ರೂಪಾಯಿ ನೀಡೋ ಸವಾರರು,35 ರೂಪಾಯಿ ಕೊಟ್ಟರೆ 12 ಗಂಟೆವರೆಗೂ ಫ್ಲೈಓವರ್ ಬಳಸಬಹುದಾಗಿದೆ.
ಒಂದು ದಿನದ ದ್ವಿಚಕ್ರವಾಹನ 35,ಕಾರು 90,ವಾಣಿಜ್ಯ ವಾಹನ 125,ಟ್ರಕ್,ಬಸ್ 250, ಭಾರೀ ವಾಹನ 505 ರೂಪಾಯಿ ನೀಡಬೇಕಾಗುತ್ತದೆ.
PublicNext
01/07/2022 07:34 pm