ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸ್ತೆ ದುರಸ್ತಿ : 4 ತಿಂಗಳು ಶಿರಾಡಿ ಘಾಟಿ ರಸ್ತೆ ಬಂದ್ ಗೆ ಮನವಿ

ಮಂಗಳೂರು : ಮಳೆಗಾಲದಲ್ಲಿ ಸಾಕಷ್ಟು ಅವಘಡಗಳು ಸಂಭವಿಸುವ ಬೆಂಗಳೂರು ಸಂಪರ್ಕಿಸುವ ರಾ. ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಸಂಚಾರ ಬಂದ್ ಮಾಡುವಂತೆ ಕಾಮಗಾರಿ ಟೆಂಡರ್ ವಹಿಸಿರುವ ಸಂಸ್ಥೆ ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ.

ರಸ್ತೆ ಮಾರನಹಳ್ಳಿ,ಸಕಲೇಶಪುರ ರಸ್ತೆ ತಿರುವುಗಳನ್ನು ಹೊಂದಿದ್ದು, ದುರಸ್ತಿಗೆ ರಸ್ತೆ ಬಂದ್ ಮಾಡುವುದು ತೀರಾ ಅಗತ್ಯ ಎಂದು ಗುತ್ತಿಗೆದಾರರು ಪ್ರತಿಪಾದಿಸಿದ್ದಾರೆ.

ಇನ್ನು ಸದ್ಯಕ್ಕೆ ರಸ್ತೆಯನ್ನು ಮುಚ್ಚುವ ಚಿಂತನೆ ಇಲ್ಲ. ಅಧಿಕಾರಿಗಳು, ತಂತ್ರಜ್ಞರ ಜತೆ ಜಂಟಿ ಸರ್ವೇ ನಡೆಸಿ ಯಾವ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಬಹುದು ಎಂಬ ಬಗ್ಗೆ ಶೀಘ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

27/06/2022 01:38 pm

Cinque Terre

21.14 K

Cinque Terre

0

ಸಂಬಂಧಿತ ಸುದ್ದಿ