ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೀರಿಗೆ ಹಾಹಾಕಾರ: ಕೊಡ ನೀರಿಗಾಗಿ ಜನರ ಹೋರಾಟ

ಮುಂಬೈ: ಮಹಾರಾಷ್ಟ್ರ ಮೆಲ್ಘಾಟ್‌ನ ಖಾಡಿಯಾಲ್ ಗ್ರಾಮದ ಜನರು ಕೊಡ ನೀರಿಗಾಗಿ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.

"ಗ್ರಾಮದಲ್ಲಿ ಇರುವ ಕೇವಲ ಎರಡು ಬಾವಿಗಳು ಬಹುತೇಕ ಬತ್ತಿ ಹೋಗಿವೆ. 1,500 ಜನಸಂಖ್ಯೆಯ ಗ್ರಾಮವು ಪ್ರತಿದಿನ 2-3 ಟ್ಯಾಂಕರ್ ನೀರಿಗಾಗಿ ಎದುರು ನೋಡುತ್ತಿದೆ. ಬತ್ತಿದ ಬಾವಿಗಳಿಗೆ ಎರಡು ಟ್ಯಾಂಕರ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ. ಜನರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಬಾವಿಗಳಲ್ಲಿ ನೀರು ಸೇದುತ್ತಾರೆ. ಕೊಳಕು ನೀರು ಕುಡಿದು ರೋಗಗಳು ಹೆಚ್ಚಾಗುತ್ತಿವೆ. ಒಬ್ಬ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸರಿಯಾದ ರಸ್ತೆಯೇ ಇಲ್ಲ' ಎಂದು ಗ್ರಾಮಸ್ಥರು ಕಣ್ಣೀರಿಟ್ಟಿದ್ದಾರೆ.

Edited By : Vijay Kumar
PublicNext

PublicNext

10/06/2022 10:43 am

Cinque Terre

40.87 K

Cinque Terre

2

ಸಂಬಂಧಿತ ಸುದ್ದಿ