ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಲಕ್ಷ್ಮೇಶ್ವರ: ಸೇತುವೆ ಇಲ್ಲದ ಹಳ್ಳ: ಶಾಲಾ ಮಕ್ಕಳ ಸಂಚಾರಕ್ಕೆ ನಿರ್ಬಂಧ

ಲಕ್ಷ್ಮೇಶ್ವರ: ತಾಲೂಕಿನ ಎತ್ತಿನಹಳ್ಳಿ ಹಾಗೂ ಮಾಡಳ್ಳಿ ಗ್ರಾಮದ ಮಧ್ಯೆ ಇರುವ ಹಳ್ಳ ಅವಳಿ ಗ್ರಾಮಗಳ ಸಂಚಾರಕ್ಕೆ ಸಮಸ್ಯೆ ತಂದೊಡ್ಡಿದೆ.

ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳಕ್ಕೆ ಸೇತುವೆ ಅವಶ್ಯಕತೆ ಇದ್ದು, ಇದುವರೆಗೂ ಆ ಭಾಗ್ಯ ಹಳ್ಳಕ್ಕೆ ಕೂಡಿ ಬಂದಿಲ್ಲ. ಈ ಕಾರಣ ಹಳ್ಳದ ಪ್ರವಾಹ ಹೆಚ್ಚಾಗಿ ಎತ್ತಿನಹಳ್ಳಿಗೆ ತೆರಳುವ ಶಾಲಾ ಮಕ್ಕಳು ಶಿಕ್ಷಕರು ಹಳ್ಳದ ಪ್ರವಾಹ ಕಡಿಮೆ ಆಗುವವರೆಗೂ ಕಾಯಬೇಕಾದ ಅನಿವಾರ್ಯತೆ ಇದುರಾಗಿದೆ. ಈ ಬಗ್ಗೆ ಎತ್ತಿನಹಳ್ಳಿ ಗ್ರಾಮಸ್ಥ ಮೃತ್ಯುಂಜಯ ಹಿರೇಮಠ ಪಬ್ಲಿಕ್ ನೆಕ್ಸ್ಟ್'ಗೆ ವಿಡಿಯೋ ಕಳುಹಿಸಿ ತಮ್ಮ ಸಮಸ್ಯೆ ವಿವರಿಸಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಹಳ್ಳದ ಪರಿಸ್ಥಿತಿಯಿಂದ ಅವಳಿ ಗ್ರಾಮಸ್ಥರ ಸಂಪರ್ಕಕ್ಕೆ ಮಳೆಗಾಲದಲ್ಲಿ ನಿರ್ಬಂಧ ಇದ್ದು, ಶಾಲಾ ಮಕ್ಕಳಿಗೂ ಸಮಸ್ಯೆ ತಂದಿದೆ. ಈ ಬಗ್ಗೆ ಸಂಬಂಧಪಟ್ಟ ಸ್ಥಳೀಯ ಜನಪ್ರತಿನಿಧಿಗಳು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಿಸ ಬೇಕಾಗಿದೆ.

ವೀಕ್ಷಕರ ವರದಿ

Edited By : Manjunath H D
PublicNext

PublicNext

03/06/2022 03:12 pm

Cinque Terre

34.56 K

Cinque Terre

0

ಸಂಬಂಧಿತ ಸುದ್ದಿ