ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಕೊನೆಗೂ ಈಡೇರಿತು ದಶಕಗಳ ಬೇಡಿಕೆ: ನೀರಿನ ಹರಿವು ಕಂಡು ಖುಷಿಯಾದ ರೈತರು

ದಾವಣಗೆರೆ: ಭರಮಸಾಗರ, ಜಗಳೂರು, ಮಾಯಕೊಂಡ ಜನರಿಗೆ ನೀರುಣಿಸುವ ನೀರಾವರಿ ಯೋಜನೆ ಯಶಸ್ವಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆ ತುಂಬಿಸುವ ಯೋಜನೆ ಯಶಸ್ವಿಯಾಗಿದೆ. ಸಿರಿಗೆರೆಯ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜೀಯವರ ಆಶೀರ್ವಾದದೊಂದಿಗೆ ಮಹತ್ವಾಕಾಂಕ್ಷೆ ಯೋಜನೆಯು ಸಾಕಾರಗೊಂಡಿದೆ

ಪ್ರಾಥಮಿಕ ಹಂತವಾಗಿ ಚಟ್ನಿಹಳ್ಳಿ ಗುಡ್ಡಕ್ಕೆ ನೀರು ಬರುತ್ತಿದ್ದು, ಇಲ್ಲಿಂದ ತುಪ್ಪದಹಳ್ಳಿ ಕೆರೆಗೆ ನೀರು ಹರಿಯುತ್ತಿರುವುದನ್ನು ಜಗಳೂರು ಶಾಸಕ ಎಸ್ ವಿ.ರಾಮಚಂದ್ರಪ್ಪ ಹಾಗೂ ಜನರು ವೀಕ್ಷಣೆ ಮಾಡಿ ಖುಷಿಪಟ್ಟರು.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು, ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿ ಹಾಗೂ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯ ಜನತೆ ಏತ ನೀರಾವರಿ ಯೋಜನೆಯಡಿ ಹರಿದುಬಂದ ನೀರನ್ನು ನೋಡಿ ದಶಕದಿಂದ ಕಾಣುತ್ತಿದ್ದ ಕನಸು ನನಸಾಗಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣರಾದ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಸಾವಿರ ಸಾವಿರ ಪ್ರಣಾಮಗಳನ್ನು ಅರ್ಪಿಸಿದ್ದಾರೆ.

Edited By :
PublicNext

PublicNext

06/04/2022 04:02 pm

Cinque Terre

87.46 K

Cinque Terre

0

ಸಂಬಂಧಿತ ಸುದ್ದಿ