ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು-ತುಮಕೂರು ನಡುವೆ ಎಲೆಕ್ಟ್ರಿಕ್ ರೈಲು ಓಡಾಟ

ಬೆಂಗಳೂರು ; ಎ 8 ರಿಂದ ಬೆಂಗಳೂರು- ತುಮಕೂರು ಮಧ್ಯೆ ಎಲೆಕ್ಟ್ರಿಕ್ ರೈಲು ಸಂಚಾರ ಶುರುವಾಗಲಿದೆ.ಹೌದು ಈ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದೆ. ಈ ಹಿನ್ನಲೆಯಲ್ಲಿ ಉಭಯ ನಗರಗಳ ನಡುವೆ ಪ್ರಯಾಣಿಕರ ಬೇಡಿಕೆಯಂತೆ ಹೆಚ್ಚುವರಿ ರೈಲನ್ನು ಓಡಿಸಲು ನೈಋತ್ಯ ರೈಲ್ವೆ ತೀರ್ಮಾನಿಸಿದೆ.

ಬೆಂಗಳೂರಿನ ಯಶವಂತಪುರ ಮತ್ತು ತುಮಕೂರು ನಗರಗಳ ನಡುವೆ ಇದುವರೆಗೂ 8 ಬೋಗಿಗಳ ಡೆಮು ರೈಲು ಸಂಚಾರ ನಡೆಸುತ್ತಿತ್ತು. ಈಗ ನೈಋತ್ಯ ರೈಲ್ವೆ ಡೆಮು ರೈಲು ರದ್ದುಗೊಳಿಸಿ 16 ಬೋಗಿಗಳ ಮೆಮು ರೈಲು ಓಡಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಉಭಯ ನಗರಗಳ ನಡುವೆ ಪ್ರತಿದಿನ ಸಂಚಾರ ನಡೆಸುವ ನೂರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ.

Edited By : Nirmala Aralikatti
PublicNext

PublicNext

05/04/2022 09:55 pm

Cinque Terre

29.17 K

Cinque Terre

0

ಸಂಬಂಧಿತ ಸುದ್ದಿ