ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನಲ್ಲಿಯ ಅವ್ಯವಸ್ಥೆ : ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ ನವೋದ್ಯಮಿ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸ್ಟಾರ್ಟ್ ಅಪ್ ಗಳ ಹಬ್. ಸದ್ಯ ಬೆಂಗಳೂರಿನಲ್ಲಿಯ ಕಳಪೆ ರಸ್ತೆಗಳ ಕುರಿತು ನವೋದ್ಯಮಿಯೊಬ್ಬರು ಟ್ವೀಟ್ ಮೂಲಕ ತಮ್ಮ ಗೋಳನ್ನು ಹೊರಹಾಕಿದ್ದಾರೆ.ಹೌದು ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಹಲವು ಸೇವೆಗಳನ್ನು ಒದಗಿಸುವ 'ಖಾತಾಬುಕ್' ಕಂಪನಿಯ ಸ್ಥಾಪಕ ಮತ್ತು ಸಿಇಒ ರವೀಶ್ ನರೇಶ್ ಬೆಂಗಳೂರಿನ ರಸ್ತೆಗಳ ಬಗ್ಗೆ ಬೇಸರದಿಂದ ಟ್ವೀಟ್ ಮಾಡಿದ್ದರು.

'ಕೋಟ್ಯಂತರ ಡಾಲರ್ ಮೊತ್ತದ ತೆರಿಗೆ ಪಾವತಿಸಿದರೂ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ಮತ್ತು ಕೋರಮಂಗಲ ಪ್ರದೇಶದಲ್ಲಿ ರಸ್ತೆಗಳು ಸರಿಯಿಲ್ಲ. ಪ್ರತಿದಿನ ಪವರ್ ಕಟ್. ನೀರು ಸರಿಯಾಗಿ ಬರುತ್ತಿಲ್ಲ, ಫುಟ್ ಪಾತ್ ಇಲ್ಲ. ವಿಮಾನ ನಿಲ್ದಾಣಕ್ಕೆ ಹೋಗಬೇಕೆಂದರೆ 3 ಗಂಟೆ ಬೇಕು. ಭಾರತದ ಸಿಲಿಕಾನ್ ವ್ಯಾಲಿಗಿಂತಲೂ ಗ್ರಾಮೀಣ ಪ್ರದೇಶದಲ್ಲಿಯೇ ಅತ್ಯುತ್ತಮ ಸೌಕರ್ಯಗಳಿವೆ ಎಂದು ಹೇಳಿದ್ದರು.

ಮತ್ತೋರ್ವ ಉದ್ಯಮಿ, ಸೇತು ಎಪಿಐನ ಸ್ಥಾಪಕ ನಿಖಿಲ್ ಕುಮಾರ್ ಸಹ ರವೀಶ್ ನರೇಶ್ ಅವರ ಟ್ವೀಟ್ ಅನ್ನು ರಿಟ್ವೀಟ್ ಮಾಡಿ 'ಬೆಂಗಳೂರು ಗೊಂದಲದ ಗೂಡಾಗಿದೆ. ದಯವಿಟ್ಟು ಗಮನಿಸಿ ಸರ್, ನೀವು ಈ ಕಡೆಗೆ ಗಮನ ಕೊಡದಿದ್ದರೆ ಸಾಮೂಹಿಕ ವಲಸೆ ಶುರುವಾಗುತ್ತದೆ' ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟ್ಯಾಗ್ ಮಾಡಿದ್ದರು.

ಈ ಟ್ವೀಟ್ಗಳಿಗೆ ಪ್ರತಿಕ್ರಿಯಿಸಿದ ತೆಲಂಗಾಣದ ಕೈಗಾರಿಕೆ, ವಾಣಿಜ್ಯ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಕೆ.ಟಿ.ರಾಮಾರಾವ್, 'ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು, ಹೈದರಾಬಾದ್ ಗೆ ಬಂದು ಬಿಡಿ' ನಮ್ಮಲ್ಲಿ ಉತ್ತಮ ಮೂಲಸೌಕರ್ಯಗಳಿವೆ. ನಮ್ಮ ವಿಮಾನ ನಿಲ್ದಾಣವು ಅತ್ಯುತ್ತಮವಾಗಿದೆ. ನಮ್ಮ ನಗರದ ಹೊರವಲಯದಲ್ಲಿ ತಣ್ಣನೆ ವಾತಾವರಣವಿದೆ. ನಮ್ಮ ಸರ್ಕಾರವು ಆವಿಷ್ಕಾರ, ಮೂಲಸೌಕರ್ಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಬದ್ಧವಾಗಿದೆ' ಎಂದು ಭರವಸೆ ನೀಡಿದ್ದಾರೆ.

Edited By : Nirmala Aralikatti
PublicNext

PublicNext

03/04/2022 11:04 am

Cinque Terre

21.85 K

Cinque Terre

3

ಸಂಬಂಧಿತ ಸುದ್ದಿ