ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಎಂಟು ದಿನ ಕೆಲವೆಡೆ ರೈಲು ಸಂಚಾರ ವ್ಯತ್ಯಯ

ಬೆಂಗಳೂರು: ರೈಲು ಮೂಲ ಸೌಕರ್ಯ ವೃದ್ಧಿ , ವಿದ್ಯುದೀಕರಣ ಹಾಗೂ ಸಾಮರ್ಥ್ಯ ಮತ್ತು ಸುರಕ್ಷತೆಯ ಸುಧಾರಣಾ ಕಾರ್ಯಗಳ ಹಿನ್ನೆಲೆ ಇಂದಿನಿಂದ (ಮಾರ್ಚ್23) ಎಂಟು ದಿನಗಳವರೆಗೆ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈರುತ್ಯ ರೈಲ್ವೆಯ ಪ್ರಯಾಣಿಕರ ಸೌಕರ್ಯ ವಿಭಾಗದ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಡಾ|ಅನೂಪ್‌ ದಯಾನಂದ್‌ ಸಾಧು ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 23ರಿಂದ 29ರವರೆಗೆ ಯಲಹಂಕದ ಹಿಂದೂಪುರ-ಪೆನುಕೊಂಡ, ಯಲವಿಗಿ-ಸವಣೂರು, ಸವಣೂರು-ಹಾವೇರಿ, ಹೊಸದುರ್ಗ-ಚಿಕ್ಕಜಾಜೂರು, ಅಳ್ನಾವರ-ಅಂಬೆವಾಡಿ, ಗದಗ- ಹೊಳೆಆಲೂರು, ಸೌಂಶಿ-ಯಲವಿಗಿ, ಕುಡಚಿ-ಘಟಪ್ರಭಾ, ಲೋಂಡಾ-ತಿನೈಘಾಟ್‌ ಮಾರ್ಗದ ರೈಲು ಹಳಿಗಳಲ್ಲಿ ಕೆಲವು ಕಡೆ ದ್ವಿಪಥ ಮಾರ್ಗ ಹಾಗೂ ಇನ್ನೂ ಕೆಲವು ಮಾರ್ಗಗಳಲ್ಲಿ ವಿದ್ಯುದೀಕರಣಗೊಳಿಸುವ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದ ಹತ್ತು ರೈಲುಗಳನ್ನು ರದ್ದುಗೊಳಿಸಲಾಗಿದ್ದು, 14 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಟಿಕೆಟ್‌ ಕಾಯ್ದಿರಿಸಿದ ಪ್ರಯಾಣಿಕರಿಗೆ ಹಣ ವಾಪಾಸು ನೀಡಲಾಗುತ್ತದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಡಾ|ಅನೂಪ್‌ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

23/03/2022 03:21 pm

Cinque Terre

28.39 K

Cinque Terre

0

ಸಂಬಂಧಿತ ಸುದ್ದಿ