ಹುಬ್ಬಳ್ಳಿ: ಭಾರತಕ್ಕೆ ಜವಾದ್ ಚಂಡಮಾರುತ ಅಪ್ಪಳಿಸಲಿದ್ದು, ಆಂಧ್ರಪ್ರದೇಶ, ಒಡಿಶಾ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸುವಂತೆ ಮುನ್ಸೂಚನೆ ನೀಡಲಾಗಿದೆ. ಜವಾದ್ ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಂಚರಿಸುವ 12 ರೈಲುಗಳ ಸೇವೆಯನ್ನು ಇಂದಿನಿಂದ ಶನಿವಾರದವರೆಗೆ ರದ್ದು ಮಾಡುವುದಾಗಿ ನೈರುತ್ಯ ರೈಲ್ವೆ ವಲಯ ಮಾಹಿತಿ ನೀಡಿದೆ.
ಯಾವ್ಯಾವ ರೈಲು ಸಂಚಾರ ರದ್ದು?:
1. ಶುಕ್ರವಾರ (ಡಿ.3) ರೈಲು ಸಂಖ್ಯೆ 22883 ಪುರಿ – ಯಶವಂತಪುರ ಗರೀಬ್ ರಥ್ ಎಕ್ಸ್ ಪ್ರೆಸ್.
2. ಶುಕ್ರವಾರ (ಡಿ.3) ರೈಲು ಸಂಖ್ಯೆ 12245 ಹೌರಾ – ಯಶವಂತಪುರ ದುರೊಂತೋ ಎಕ್ಸ್ ಪ್ರೆಸ್.
3. ಶುಕ್ರವಾರ (ಡಿ.3) ರೈಲು ಸಂಖ್ಯೆ 22817 ಹೌರಾ – ಮೈಸೂರು ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್.
4. ಶುಕ್ರವಾರ (ಡಿ.3) ರೈಲು ಸಂಖ್ಯೆ 12863 ಹೌರಾ – ಯಶವಂತಪುರ ಎಕ್ಸ್ ಪ್ರೆಸ್.
5. ಶನಿವಾರ (ಡಿ.4) ರೈಲು ಸಂಖ್ಯೆ 18463 ಭುವನೇಶ್ವರ – ಕೆಎಸ್ಆರ್ ಬೆಂಗಳೂರು ಪ್ರಶಾಂತಿ ಎಕ್ಸ್ ಪ್ರೆಸ್.
6. ಶುಕ್ರವಾರ (ಡಿ.3) ರೈಲು ಸಂಖ್ಯೆ 12889 ಟಾಟಾನಗರ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್.
7. ಶನಿವಾರ (ಡಿ.4) ರೈಲು ಸಂಖ್ಯೆ 18637 ಹಟಿಯಾ – ಬೆಂಗಳೂರು ಕಂಟೋನ್ಮೆಂಟ್ ಎಕ್ಸ್ ಪ್ರೆಸ್.
8. ಇಂದು (ಡಿ.2) ರೈಲು ಸಂಖ್ಯೆ 12509 ಬೆಂಗಳೂರು ಕಂಟೋನ್ಮೆಂಟ್ – ಗುವಾಹಟಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್.
9: ಶುಕ್ರವಾರ (ಡಿ.3) ರೈಲು ಸಂಖ್ಯೆ 12246 ಯಶವಂತಪುರ – ಹೌರಾ ದುರಾಂಟೊ ಎಕ್ಸ್ ಪ್ರೆಸ್ ಸೇವೆ.
10: ಶುಕ್ರವಾರ (ಡಿ.3) ರೈಲು ಸಂಖ್ಯೆ 12246 ಯಶವಂತಪುರ – ಹೌರಾ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್..
11 : ಶುಕ್ರವಾರ (ಡಿ.3) ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ – ಹೌರಾ ಅಮರಾವತಿ ಎಕ್ಸ್ ಪ್ರೆಸ್
12. ಶುಕ್ರವಾರ (ಡಿ.3) ರೈಲು ಸಂಖ್ಯೆ 18464 ಕೆಎಸ್ಆರ್ ಬೆಂಗಳೂರು – ಭುವನೇಶ್ವರ ಪ್ರಶಾಂತಿ ಎಕ್ಸ್ ಪ್ರೆಸ್.
PublicNext
02/12/2021 07:38 pm