ವಿಶೇಷ ವರದಿ: ಗಣೇಶ್ ಹೆಗಡೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಹೆಚ್ಚಾಗುತ್ತಿದ್ದಂತೆಯೇ ರಸ್ತೆ ಕೆರೆ ಗಳಂತಾಗಿವೆ. ನಗರದ 21ಕ್ಕೂ ಹೆಚ್ಚು ಮುಖ್ಯ ರಸ್ತೆಗಳು ಗುಂಡಿ ಮಯವಾಗಿದೆ!
ಮಳೆಗಾಲದ ಆರಂಭದಲ್ಲಿ ಎರಡು ತಿಂಗಳ ಹಿಂದೆಯೇ ಬಿಬಿಎಂಪಿ ಗುಂಡಿ ಮುಚ್ಚುವ ಕಾರ್ಯ ಪೂರ್ಣಗೊಳಿಸಿತ್ತು.
ಅ ಸಂದರ್ಭ ನಗರದಲ್ಲಿ 59 ರಸ್ತೆಗಳು ಮಾತ್ರ ಗುಂಡಿಗಳಿಂದ ಕೂಡಿತ್ತು.
ಅದರೆ, ಕಳೆದ ವಾರದಿಂದಲೂ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ.
ಸಿಟಿಯಲ್ಲಿ 1344 ಕಿ.ಮೀ. ವಿಸ್ತೀರ್ಣ ಇದೆ. ಇದ್ರಲ್ಲಿ 1004 ಕಿ.ಮೀ. ಗುಂಡಿಮುಕ್ತ ರಸ್ತೆಗಳಿವೆ. ಆದರೆ, 344 ಕಿ.ಮೀ. ರೋಡ್ ಹೊಂಡಾಗುಂಡಿಗಳಿಂದ ತುಂಬಿದೆ.
ಇನ್ನು, ಹೈಕೋರ್ಟ್ ಕೂಡ ಮತ್ತೊಂದು ಗಡುವು ಬಿಬಿಎಂಪಿಗೆ ನೀಡಿದೆ. ಮೊನ್ನೆ ನಡೆದ ವಿಚಾರಣೆಯಲ್ಲಿ ಜನವರಿ ಒಳಗೆ ನಗರದ ರಸ್ತೆ ಗುಂಡಿ ಮುಕ್ತವಾಗಬೇಕೆಂದು ಖಡಕ್ ಸೂಚನೆ ನೀಡಿದೆ.
59ಕ್ಕೆ ಇದ್ದ ಹದಗೆಟ್ಟ ರಸ್ತೆಗಳ ಸಂಖ್ಯೆ 80 ಏರಿದೆ. ಮಳೆಗಾಲದ ಪರಿಣಾಮ ವಾಹನ ಸವಾರರನ್ನು ಬಲಿ ಪಡೆಯಲು ಗುಂಡಿಗಳು ಬಾಯಿ ತೆರೆದು ಕೂತಿವೆ! ಮೈಸೂರು ರಸ್ತೆ, ನಾಗರಭಾವಿ, ಉತ್ತರಹಳ್ಳಿ, ಕೆಂಗೇರಿ ಮುಖ್ಯರಸ್ತೆ, ಕೆ.ಆರ್ .ಪುರಂ ಸೇರಿದಂತೆ ನಗರದ ಪೂರ್ವ ಭಾಗದ ರಸ್ತೆಗಳ ಸಾಕಷ್ಟು ಗುಂಡಿಗಳು ಹಾಗೆ ಉಳಿದಿವೆ.
PublicNext
16/11/2021 08:50 pm