ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

100 ರೂ.ಬಾಡಿಗೆ ಬಂದು 6 ಸಾವಿರ ಸಾಲ ಮಾಡಿದ ಆಟೋ ಚಾಲಕ

ಚಿಕ್ಕಮಗಳೂರು: ಕಳೆಪೆ ಕಾಮಗಾರಿಕೆಗೆ ಸಾಮಾನ್ಯ ಜನರೇ ಬಲಿ ಆಗೋದು. ಮಾಡಿದವ್ರೂ ಹೋಗ್ತಾರೆ, ದುಡ್ಡು ತಿಂದೋರು ಹೋಗ್ತಾರೆ.ಇಲ್ಲಿ ಆಗಿದ್ದು ಅದೇನೆ. ಕಳಪೆ ಕಾಮಗಾರಿಯ ಸೇತುವೆ ಭಾರಿ ಮಳೆಗೆ ಬಿದ್ದ ಪರಿಣಾಮ, 100 ರೂಪಾಯಿ ಬಾಡಿಗೆ ಬಂದು ಆಟೋಗಾಗಿ 6 ಸಾವಿರ ಸಾಲ ಮಾಡಿದ ಒಬ್ಬ ಆಟೋ ಚಾಲಕನ ಸ್ಟೋರಿ ಇಲ್ಲಿದೆ.

ವಿನೋದ್ ಅನ್ನೋದು ಆ ದುರದುಷ್ಟ ಆಟೋ ಚಾಲಕನ ಹೆಸರು.ಪಾಪ ಕೇವಲ 100 ರೂಪಾಯಿ ಬಾಡಿಗೆಗೆ ಇಲ್ಲಿಯ ಮಧುವನ ಮುಕ್ತ ವಿಶ್ವ ವಿದ್ಯಾಲಯದ ವಿದ್ಯಾರ್ಥಿಯನ್ನ ಬಿಡಲು ಬಂದಿದ್ದ. ದುರಂತ ನೋಡಿ, ವಿಶ್ವ ವಿದ್ಯಾಲಯದ ಗೇಟ್ ಬಳಿ ಇರೋ ಸೇತುವೆ ಭಾರಿ ಮಳೆಗೆ ಕುಸಿದು ಬಿದ್ದಿದೆ.

ಇದು ತಿಳಿಯುತ್ತಿದಂತೇನೆ,ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳನ್ನ ಅಗ್ನಿಶಾಮಕ ದಳ ರಕ್ಷಣೆ ಮಾಡಿದೆ. ಆದರೆ ವಿಶ್ವ ವಿದ್ಯಾಲದಯಲ್ಲಿಯೇ ಆಟೋ ಸಮೇತ ಲಾಕ್ ಆದ ಆಟೋ ಚಾಲಕನ ಕಥೆ ಹೇಳಿ. ಜಿಲ್ಲಾಡಳಿತವೂ ಹೆಲ್ಪ್ ಮಾಡಲಿಲ್ಲ.ವಿಶ್ವ ವಿದ್ಯಾಲಯವೂ ಸಹಾಯ ಮಾಡಲೇ ಇಲ್ಲ. ಕೊನೆಗೆ 6000 ರೂಪಾಯಿ ಸಾಲವನ್ನ ಮಾಡಿ, ಕ್ರೇನ್ ಮೂಲಕ ಆಟೋ ತೆಗೆದುಕೊಂಡು ಹೋಗಿದ್ದಾನೆ ವಿನೋದ್. ಈ ಆಟೋ ಚಾಲಕನ ಗೋಳು ಕೇಳುವವರೇ ಇಲ್ಲವೇ ?

Edited By :
PublicNext

PublicNext

22/10/2021 09:48 pm

Cinque Terre

21.97 K

Cinque Terre

0

ಸಂಬಂಧಿತ ಸುದ್ದಿ