ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು- ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಕೊಂಚ ಬದಲಾವಣೆ: ಗಮನಿಸಿ

ಹುಬ್ಬಳ್ಳಿ: ಅರಸಿಕೆರೆ ತುಮಕೂರು ವಿಭಾಗದದಲ್ಲಿ ರೈಲು ಮಾರ್ಗ ರಿಪೇರಿ ಕಾರ್ಯ ಪ್ರಕ್ರಿಯೆಯಲ್ಲಿದೆ. ಹೀಗಾಗಿ ಈ ಮಾರ್ಗವಾಗಿ ಹೊರಡುವ ರೈಲುಗಳ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಆಗಲಿದೆ. ನಾಳೆ ಎಂದರೆ 11 ಅಕ್ಟೋಬರ್ 2021ರಂದು ಮಾತ್ರ ಇದು ಅನ್ವಯಿಸಲಿದೆ.

ತಡವಾಗಿ ಹೊರಡಲಿರುವ ರೈಲುಗಳು

*ಗಾಡಿ ಸಂಖ್ಯೆ 07325 ಬೆಳಗಾವಿ-ಮೈಸೂರು ಎಕ್ಸ್‌ಪ್ರೆಸ್ ರೈಲು ಬೆಳಗಾವಿಯಿಂದ 75 ನಿಮಿಷ ತಡವಾಗಿ ಹೊರಡಲಿದೆ.

*ಗಾಡಿ ನಂಬರ್ 06522 ಜೈಪುರ್- ಯಶವಂತಪುರ್ ಸುವಿಧಾ ಎಕ್ಸ್‌ಪ್ರೆಸ್ ರೈಲು ಜೈಪುರದಿಂದ 75 ನಿಮಿಷ ತಡವಾಗಿ ಹೊರಡಲಿದೆ.

ಬದಲಾವಣೆ ಆಗಲಿರುವ ರೈಲು ಮಾರ್ಗಗಳು

* ಗಾಡಿ ಸಂಖ್ಯೆ 06237 ಮೈಸೂರು-ಸಾಯಿನಗರ ಶಿರಡಿ ರೈಲು ನಾಳೆ ಅಕ್ಟೋಬರ್ 11ರಂದು ಮೈಸೂರಿನಿಂದ ಹೊರಟು ಯಶವಂತಪುರ, ನೆಲಮಂಗಲ, ಹಾಸನ, ಅರಸಿಕೆರೆ ಮಾರ್ಗವಾಗಿ ಹೊರಡಲಿದೆ.

*ಗಾಡಿ ನಂಬರ್ 04805 ಮೈಸೂರು ಬೆಳಗಾವಿ ಎಕ್ಸ್‌ಪ್ರೆಸ್ ರೈಲು ನಾಳೆ ಅಕ್ಟೋಬರ್ 11ರಂದು ಮೈಸೂರಿನಿಂದ ಹೊರಟು ಯಶವಂತಪುರ, ನೆಲಮಂಗಲ, ಹಾಸನ ಮತ್ತು ಅರಸಿಕೆರೆ ಮಾರ್ಗವಾಗಿ ತೆರಳಲಿದೆ.

*ಇದೇ ರೀತಿ ನಾಳೆ ಅಕ್ಟೋಬರ್ 11ರಂದು ಯಶವಂತಪುರದಿಂದ ಹೊರಡಲಿರುವ 06249 ಸಂಖ್ಯೆಯ ಯಶವಂತಪುರ, ಹಜರತ್ ನಿಝಾಮುದ್ದೀನ್ ರೈಲು ನೆಲಮಂಗಲ, ಹಾಸನ, ಅರಸಿಕೆರೆ ಮಾರ್ಗವಾಗಿ ತೆರಳಲಿದೆ.

Edited By : Nagaraj Tulugeri
PublicNext

PublicNext

10/10/2021 04:50 pm

Cinque Terre

30.27 K

Cinque Terre

1