ಬೆಂಗಳೂರು: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು 2024ರ ಹೊತ್ತಿಗೆ 102 ರೈಲು ಓಡಿಸಲು ತೀರ್ಮಾನಿಸಿದೆ. ಬೆಂಗಳೂರು – ಧಾರವಾಡ ನಡುವೆ ಕೂಡ ಈ ರೈಲು ಸಂಚಾರ ನಡೆಸಲು ಮಾಡಿದ ಮನವಿಗೆ ಇಲಾಖೆ ಸ್ಪಂದಿಸಿದೆ.
ಮೊದಲ ದೇಶಿಯ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ಆರಂಭಿಸಿ 1ವರ್ಷ ಕಳೆದಿದೆ. ಬೆಂಗಳೂರು- ಧಾರವಾಡ ನಡುವೆ ಓಡಿಸಲು ಮನವಿಯನ್ನು ಸಲ್ಲಿಸಿದ್ದಾರೆ. ಶೇ100ರಷ್ಟು ದೇಶಿಯವಾಗಿ ನಿರ್ಮಾಣ ಮಾಡಲಾದ ರೈಲು ಪ್ರಧಾನಿ ನರೇಂದ್ರ ಮೋದಿ ಕನಸಿನ ಆತ್ಮ ನಿರ್ಭರ ಭಾರತ ಪರಿಕಲ್ಪನೆ ಗಮನದಲ್ಲಿಟ್ಟುಕೊಂಡು ಈ ರೈಲನ್ನು ತಯಾರಿಸಲಾಗಿದೆ. 2022ರ ಆಗಸ್ಟ್ 23ರೊಳಗೆ ಇನ್ನೂ 75 ಹೊಸ ರೈಲುಗಳನ್ನು ಓಡಿಸುವ ಗುರಿಯನ್ನು ಇಲಾಖೆ ಹೊಂದಿದೆ. 2024ರ ಹೊತ್ತಿಗೆ 102 ವಂದೇ ಭಾರತ್ ಎಕ್ಸ್ ಪ್ರೆಸ್ ರೈಲುಗಳನ್ನು ಸಂಚಾರ ನಡೆಸಬೇಕು ಎಂಬುದು ಗುರಿಯಾಗಿದೆ.
PublicNext
01/10/2021 09:15 am