ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಕಳೆದ ಒಂದೂವರೆ ವರ್ಷದಿಂದ ನಿರಂತರ ಪ್ರತಿಭಟನೆ ಮಾಡುತ್ತಿದ್ದಾರೆ. ಇದೇ ಪ್ರತಿಭಟನೆಗೆ ಸಂಬಂಧಿಸಿದಂತೆ ನಾಳೆ ಸೋಮವಾರ 2ನೇ ಬಾರಿಗೆ ಭಾರತ ಬಂದ್ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ ಮಂಡ್ಯ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬಳ್ಳಾರಿ, ದಾವಣಗೆರೆ ಎಲ್ಲಾ ಜಿಲ್ಲೆಗಳಲ್ಲೂ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೂ ಬಂದ್ ಇರಲಿದೆ.
ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಬಂದ್ಗೆ ಕರ್ನಾಟಕದಲ್ಲಿ ಸಂಘಟನೆಗಳ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ಮತ್ತು ಕೊರೊನಾದಿಂದ ಆಗಿರುವ ನಷ್ಟದ ಕಾಲದಲ್ಲಿ ಬಂದ್ ಗೆ ಕರೆ ನೀಡಿರುವ ಕಾರಣ ರಾಜ್ಯದಲ್ಲಿ ಸಂಘಟನೆಗಳು ಉತ್ಸಾಹ ತೋರಿಸಿಲ್ಲ. ರೈತರ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲ ಇದ್ದೇ ಇದೆ ಅಂದಿದ್ದಾರೆ. ಆದರೆ, ನೈತಿಕ ಬೆಂಬಲ ಬೇಡ. ಸಂಪೂರ್ಣ ಬೆಂಬಲ ನೀಡಿ ಅಂತ ರೈತ ಮುಖಂಡರು ಕೇಳಿದ್ದಾರೆ. ಹಾಗಾಗಿ, ನಾಳಿನ ಬಂದ್ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ..
ಏನಿರುತ್ತೆ?
ಕೆಎಸ್ ಆರ್ ಟಿಸಿ , ಬಿಎಂಟಿಸಿ, ಮೆಟ್ರೋ, ಖಾಸಗಿ ಬಸ್, ಲಾರಿ, ಆಟೋ, ಕ್ಯಾಬ್, ಹೋಟೆಲ್, ಅಂಗಡಿ ಮುಂಗಟ್ಟು, ಶಾಲೆ, ಕಾಲೇಜು, ಸರ್ಕಾರಿ-ಖಾಸಗಿ ಕಚೇರಿ, ಆಸ್ಪತ್ರೆ, ಅಂಬುಲೆನ್ಸ್, ಮೆಡಿಕಲ್ ಓಪನ್ ಇರತ್ತೆ. ನಾಳೆ ಭಾರತ್ ಬಂದ್ ಗೆ ಕರೆ ಕೊಟ್ಟಿದ್ದರು ಈ ಬಂದ್ ಯಶಸ್ಸು ಕಾಣುವ ಸಾಧ್ಯತೆಗಳು ಕಡಿಮೆ ಇದೆ.
PublicNext
26/09/2021 10:10 pm