ನವದೆಹಲಿ: ದೇಶದಲ್ಲಿ ತೈಲ ಬೆಲೆ ದಿನೇದಿನೇ ಹೆಚ್ಚಳವಾಗುತ್ತಲೇ ಇದೆ. ಈಗಾಗಲೇ ಬ್ಯಾಟರಿ ಚಾಲಿತ ವಾಹನಗಳು ದೇಶಾದ್ಯಂತ ರಸ್ತೆಗಿಳಿದಿವೆ. ಈ ನಡುವೆ ಸಾರಿಗೆ ವೆಚ್ಚ ಕಡಿಮೆ ಮಾಡಬಲ್ಲ ಎಲೆಕ್ಟ್ರಿಕ್ ಹೆದ್ದಾರಿಯನ್ನು ನಿರ್ಮಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂಬ ಮಾಹಿತಿ ಇದೆ.
ಈ ಬಗ್ಗೆ ಟ್ವೀಟ್ ಮೂಲಕ ಈ ಯೋಜನೆ ಬಗ್ಗೆ ಕರ್ನಾಟಕ ಬಿಜೆಪಿ ವಿಷಯ ಪ್ರಸ್ತಾಪ ಮಾಡಿದೆ.
ಪೆಟ್ರೋಲ್ & ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮೋದಿ ಸರ್ಕಾರ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣದ ಪ್ರಸ್ತಾವನೆ ಮಾಡಿದೆ. ಪ್ರಾಯೋಗಿಕವಾಗಿ ದೆಹಲಿ ಹಾಗೂ ಜೈಪುರದ ನಡುವೆ ಎಲೆಕ್ಟ್ರಿಕ್ ಹೆದ್ದಾರಿ ನಿರ್ಮಾಣ ಮಾಡುವ ಯೋಜನೆ ಇದೆ. ಹಾಗೂ ಎರಡನೇ ಹಂತದಲ್ಲಿ ದೆಹಲಿ ಹಾಗೂ ಮುಂಬೈ ನಡುವೆ ಹೆದ್ದಾರಿ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ಬಿಜೆಪಿ ತಿಳಿಸಿದೆ.
PublicNext
23/09/2021 04:31 pm