ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಗತ್ತಿನಲ್ಲೇ ಡ್ರೈವಿಂಗ್‌ಗೆ ಅತಿ ಕಷ್ಟದ ಸಿಟಿ ಮುಂಬೈ- 11ನೇ ಸ್ಥಾನದಲ್ಲಿ ಬೆಂಗಳೂರು

ಮುಂಬೈ: ಬೆಂಗಳೂರಿನಲ್ಲಿ ಟ್ರಾಫಿಕ್ ಕಿರಿಕಿರಿ ಬಗ್ಗೆ ಕೇಳದವರೇ ಇಲ್ಲ. ಅಬ್ಬಾ ಆ ಟ್ರಾಫಿಕ್ ಕಿರಿಕಿರಿ ಬೇಡವೇ ಬೇಡ ಎಂದವರೂ ಉಂಟು. ಇದಕ್ಕೆ ಸಾಕ್ಷಿ ಎನ್ನುವಂತೆ ವರದಿಯೊಂದು ಹೊರ ಬಿದ್ದಿದ್ದು, ಜಗತ್ತಿನಲ್ಲೇ ಡ್ರೈವಿಂಗ್‌ಗೆ ಅತಿ ಕಷ್ಟದ ನಗರಗಳ ಪಟ್ಟಿಯಲ್ಲಿ ಬೆಂಗಳೂರು 11ನೇ ಸ್ಥಾನದಲ್ಲಿದೆ.

ಈ ಕುರಿತು ಬ್ರಿಟನ್‌ನ ಕಾರ್‌ ಶೇರಿಂಗ್ ಕಂಪನಿ 'ಹಯಾಕಾರ್' ಜಗತ್ತಿನ ಅತ್ಯಂತ ಜನನಿಬಿಡ 36 ದೇಶಗಳಲ್ಲಿ ಸಮೀಕ್ಷೆ ನಡೆಸಿದೆ. ಅವುಗಳ ಪೈಕಿ ವಾಹನ ಸವಾರರಿಗೆ ಅತ್ಯಂತ ಸವಾಲಿನ ನಗರಗಳು ಯಾವುವು ಎಂಬುದನ್ನು ಪಟ್ಟಿ ಮಾಡಲಾಗಿದೆ. ಇದರ ಅನ್ವಯ ಆಯಾ ನಗರದಲ್ಲಿ ಎಷ್ಟು ಕಾರುಗಳಿವೆ, ಎಷ್ಟು ವಾಹನಗಳಿವೆ, ಒಬ್ಬರಿಗೆ ಎಷ್ಟು ಕಾರಿದೆ, ಟ್ರಾಫಿಕ್‌ ಹೇಗಿರುತ್ತದೆ, ರಸ್ತೆಯ ಗುಣಮಟ್ಟ, ಸಾರ್ವಜನಿಕ ಸಾರಿಗೆಗಳು, ರಸ್ತೆ ಅಪಘಾತಗಳು, ನಗರದ ಜನಸಂಖ್ಯೆ ಮುಂತಾದ ಅಂಶಗಳನ್ನು ಪರಿಗಣಿಸಿ ಯಾವ ನಗರವು ವಾಹನ ಸವಾರರಿಗೆ ಅತ್ಯಂತ ಕಷ್ಟದ ನಗರ ಎಂಬ ರ‍್ಯಾಂಕಿಂಗ್‌ ನೀಡಿದೆ.

ನಗರಗಳಿಗೆ ಒಟ್ಟಾರೆ 10 ಅಂಕ ನಿಗದಿಪಡಿಸಿದ್ದು, ಅದರಲ್ಲಿ ಮುಂಬೈ 7.4 ಅಂಕ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ. ದೆಹಲಿ 5.9 ಅಂಕ ಗಳಿಸಿ 4ನೇ ಸ್ಥಾನದಲ್ಲಿದೆ. ಬೆಂಗಳೂರು 4.7 ಅಂಕ ಗಳಿಸಿ 11ನೇ ಸ್ಥಾನದಲ್ಲಿದೆ. ಪೆರುವಿನ ಲಿಮಾ ನಗರ 2.1 ಅಂಕ ಗಳಿಸುವ ಮೂಲಕ ಜಗತ್ತಿನಲ್ಲೇ ವಾಹನ ಚಾಲನೆಗೆ ಅತ್ಯಂತ ನಿರಾಳ ನಗರ ಎಂಬ ಖ್ಯಾತಿ ಪಡೆದಿದೆ.

ವಾಹನ ಸವಾರರಿಗೆ ಅತಿ ಒತ್ತಡದ ನಗರಗಳು: ಮುಂಬೈ, ಪ್ಯಾರಿಸ್‌ (ಫ್ರಾನ್ಸ್‌), ಜಕಾರ್ತಾ (ಇಂಡೋನೇಷ್ಯಾ), ದೆಹಲಿ, ನ್ಯೂಯಾರ್ಕ್ (ಅಮೆರಿಕ).

ವಾಹನ ಸವಾರರಿಗೆ ಅತ್ಯಂತ ನಿರಾಳ ನಗರಗಳು: ಲಿಮಾ (ಪೆರು), ಡೊಂಗುವಾನ್ (ಚೀನಾ), ತಿಯಾಂಜಿನ್ (ಚೀನಾ), ಹಾಂಗ್‌ಜೌ (ಚೀನಾ), ಸಾವ್‌ ಪಾಲೋ (ಬ್ರೆಜಿಲ್‌).

Edited By : Vijay Kumar
PublicNext

PublicNext

21/09/2021 03:01 pm

Cinque Terre

47.18 K

Cinque Terre

0

ಸಂಬಂಧಿತ ಸುದ್ದಿ