ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರದೊಳಗೆ ಜೊಮ್ಯಾಟೊ ದಿನಸಿ ಪೂರೈಕೆ ಸೇವೆ ಸ್ಟಾಪ್

ನವದೆಹಲಿ: ಒಳ್ಳೆಯ ವಸ್ತುಗಳ ಸಪ್ಲಾಯ್ ದಿಂದ ಜನರಿಗೆ ಅನುಕೂಲವಾಗಿದ್ದ ಜೊಮ್ಯಾಟೊ ಕಂಪನಿಯು ಸೆಪ್ಟೆಂಬರ್ 17ರಿಂದ ದಿನಸಿ ಸಾಮಗ್ರಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ. ಗ್ರಾಹಕರಿಗೆ ದಿನಸಿ ಸಾಮಗ್ರಿಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಸಾಧ್ಯವಾಗುತ್ತಿಲ್ಲ ಮತ್ತು ಅದು ಗ್ರಾಹಕರಲ್ಲಿ ಅಸಮಾಧಾನ ಮೂಡಿಸುತ್ತಿದೆ ಎನ್ನುವ ಕಾರಣಗಳಿಂದಾಗಿ ಈ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಕಳೆದ ವರ್ಷ ಕೋವಿಡ್–19 ಸಾಂಕ್ರಾಮಿಕದಿಂದ ಲಾಕ್ ಡೌನ್ ಜಾರಿಗೆ ಬಂದಾಗ ಕಂಪನಿಯು ಈ ಸೇವೆಯನ್ನು ಆರಂಭಿಸಿತ್ತು.

‘ಜೊಮಾಟೊದಲ್ಲಿ, ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಮತ್ತು ನಮ್ಮ ವ್ಯಾಪಾರಿ ಪಾಲುದಾರರಿಗೆ ಅತಿದೊಡ್ಡ ಬೆಳವಣಿಗೆಯ ಅವಕಾಶಗಳನ್ನು ನೀಡುತ್ತಿರುವುದಾಗಿ ನಾವು ನಂಬುತ್ತೇವೆ. ನಮ್ಮ ಗ್ರಾಹಕರು ಮತ್ತು ವ್ಯಾಪಾರಿ ಪಾಲುದಾರರಿಗೆ ಇವುಗಳನ್ನು ತಲುಪಿಸಲು ಪ್ರಸ್ತುತ ಮಾದರಿಯು ಉತ್ತಮ ಮಾರ್ಗ ಎಂದು ನಾವು ನಂಬುವುದಿಲ್ಲ. ಹೀಗಾಗಿ ದಿನಸಿ ಸಾಮಗ್ರಿಗಳನ್ನು ಪೂರೈಸುವ ಸೇವೆಯನ್ನು ನಿಲ್ಲಿಸಲು ಉದ್ದೇಶಿಸಲಾಗಿದೆ’ ಎಂದು ದಿನಸಿ ಸಾಮಗ್ರಿಗಳನ್ನು ಪೂರೈಸುವ ಪಾಲುದಾರರಿಗೆ ಕಳುಹಿಸಿರುವ ಇ–ಮೇಲ್ನಲ್ಲಿ ತಿಳಿಸಿದೆ.

Edited By : Nirmala Aralikatti
PublicNext

PublicNext

12/09/2021 10:30 pm

Cinque Terre

60.06 K

Cinque Terre

1

ಸಂಬಂಧಿತ ಸುದ್ದಿ