ಚಾಟ್ಸ್ ಗಳಲ್ಲಿ ಬಹುತೇಕರಿಗೆ ಇಷ್ಟವಾಗುವ ಪುಡ್ ಅಂದ್ರೆ ಅದು ಪಾನಿಪುರಿ.. ಈ ಹೆಸರು ಕೇಳುತ್ತಿದ್ದಂತೆ ಬಾಯಿಯಲ್ಲಿ ನೀರು ಬರುವುದು ಸಾಮಾನ್ಯ.. ಯಾವಾಗ ತಿನ್ನುತ್ತೇವೂ ಎಂದು ಕಾಯುವವರೆ ಹೆಚ್ಚು.. ಸದ್ಯ ಪಾನಿಪುರಿ ಪ್ರಿಯರಿಗೆ ಸಿಹಿ ಸುದ್ದಿ ಒಂದಿದೆ. ಈಗ ಪಾನಿಪುರಿ ಸರ್ವ್ ಮಾಡೋಕೆ ಒಂದು ಯಂತ್ರ ಕೂಡ ಬಂದಿದೆ. ಹೌದು ಹೈದ್ರಾಬಾದ್ ಮೂಲದ ಯುವ ಉದ್ಯಮಿಯೊಬ್ಬ ಕೋವಿಡ್-19 ಸಮಯದ ವೇಳೆ, ಪಾನಿಪುರಿ ಸರ್ವ್ ಮಾಡುವ ಯಂತ್ರವನ್ನು ಕಂಡುಹಿಡಿದಿದ್ದಾನೆ. ತನ್ನ ಬ್ರಿಲಿಯಂಟ್ ಐಡಿಯಾದ ಮೂಲಕ ಪಾನಿಪುರಿ ಪ್ರಿಯರಿಗೆ ಸಂತಸದ ಸುದ್ದಿ ಕೊಟ್ಟಿದ್ದಾನೆ.
ಇದು ಸಂಪೂರ್ಣ ಸ್ವಯಂ ಚಾಲಿತ ಪಾನಿಪುರಿ ಬಡಿಸುವ ಯಂತ್ರವಾಗಿದೆ. ಇದೇ ಮೊದಲ ಬಾರಿಗೆ ಇಂತಹ ಯಂತ್ರದ ಅನ್ವೇಷಣೆಯಾಗಿದ್ದು, ಸುಮಾರು 300 ಪುರಿಗಳನ್ನು ಇರಿಸಿಕೊಳ್ಳುವ ಸಾಮರ್ಥ್ಯ ಈ ಮೆಷಿನ್ ಗಿದೆ. ಜೊತೆಗೆ ಸ್ವಯಂಚಾಲಿತವಾಗಿ ಕ್ಲೀನ್ ಕೂಡ ಮಾಡಿಕೊಳ್ಳುತ್ತದೆ. ಈ ಯಂತ್ರದಲ್ಲಿ ಆರ್ ಎಫ್ಐಡಿ ಸೆಕ್ಯೂರ್ ಪೇಮೆಂಟ್ ಸಿಸ್ಟಂ ಕೂಡ ಇದೆ. ಅಲ್ಲಿ ಸೂಚಿಸಿರುವ ಕೆಲವು ಬಟನ್ ಗಳನ್ನು ಒತ್ತಿದರೆ ಆಟೋಮೆಟಿಕ್ ಆಗಿ ಪಾನಿಪುರಿ ಸರ್ವ್ ಆಗುತ್ತದೆ. ಅಲ್ಲೇ ಪೇಮೆಂಟ್ ಕೂಡ ಮಾಡಿ ಹೋಗಬಹುದು.
ಪಾನಿಪುರಿ ಸರ್ವ್ ಮಾಡುವ ಈ ಹೊಸ ಸ್ವಯಂಚಾಲಿತ ಯಂತ್ರಕ್ಕೆ ಉತ್ತಮ ಸ್ಪಂದನೆ ಸಿಗುವ ನಿರೀಕ್ಷೆ ಇದೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಜನರು ಮೊದಲು ಸ್ವಚ್ಛತೆಗೆ ಆದ್ಯತೆ ನೀಡುತ್ತಿದ್ದಾರೆ. ಮನುಷ್ಯರಿಲ್ಲದೆ ಯಂತ್ರವೇ ಪಾನಿಪುರಿ ನೀಡುತ್ತದೆ. ಹೀಗಾಗಿ ಉತ್ತಮ ಯಶಸ್ಸು ಸಿಗುವ ನಿರೀಕ್ಷೆಯಿದೆ ಎಂದು ಎಂದು ಮನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
PublicNext
09/09/2021 01:33 pm