ಯಾದಗಿರಿ: ಇಲ್ಲಿ ನೋಡ್ರಿ.. ಈ ಸೇತುವೆ ಹೆಂಗೈತಿ ಅಂತಾ.. ಹೀಗೋ ಆಗೋ ಎನ್ನುತ್ತಾ ಯಾವಾಗ ಬೀಳುತ್ತೋ ಗೊತ್ತಿಲ್ಲ. ಎಲ್ಲೆಂದರಲ್ಲಿ ಬಿರುಕು ಬಿಟ್ಟಿದ್ದು, ದಿನನಿತ್ಯ ಹಾಳಾಗಿ ಹೋಗಿರೋ ಬ್ರಿಡ್ಜ್ ಮ್ಯಾಲ ಜೀವ ಕೈಯಾಗ ಹಿಡಿದು ಓದಾಡೋ ಪರಿಸ್ಥಿತಿ ನಿರ್ಮಾಣಾಗೈತಿ.
ಯಸ್..ಅಂದಂಗ ಈ ದೃಶ್ಯ ಕಂಡು ಬಂದಿದ್ದು, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಿಹಾಳ ಗ್ರಾಮದಲ್ಲಿ. ಹೌದು ಸುಮಾರು 40 ವರ್ಷಗಳ ಹಿಂದೆ ಈ ಸೇತುವೆ ಕಟ್ಟಿದ್ದರು. ಕಳೆದ ವರ್ಷ ಪ್ರವಾಹ ಬಂದು ಈ ಬ್ರಿಡ್ಜ್ ಸಂಪೂರ್ಣ ಶಿಥಿಲಗೊಂಡೈತಿ.
ಅಲ್ಲದೇ ಸೇತುವೆ ಸಂಪೂರ್ಣ ಕುಸಿದುಬಿಟ್ಟಿದ್ದು, ಬ್ರಿಡ್ಜ್ ಮಧ್ಯದಲ್ಲಿ ತಗ್ಗುಗಳು ಬಿದ್ದಿವೆ. ಇನ್ನು ಗ್ರಾಮಸ್ಥರು ಸೇರಿ ಕೈಲಾದಷ್ಟು ಹಣ ಹಾಕಿ ಸೇತುವೆ ಮೇಲೆ ಮರ್ಮ ಹಾಕಿದ್ದು, ತಾತ್ಕಾಲಿಕವಾಗಿ ಓಡಾಡುತ್ತಿದ್ದಾರೆ.
ಮಂಗಿಹಾಳದಿಂದ ತಾಲ್ಲೂಕು ಕೇಂದ್ರ ಸುರಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇರುವ ಹಾಳಾದ ಸೇತುವೆ ಮೇಲೆ ಜನರು ಆಸ್ಪತ್ರೆ, ಕೃಷಿ ಚಟುವಟಿಕೆಗೆ ಹಾಗೂ ಇನ್ನಿತರ ಎಲ್ಲಾ ಕೆಲ್ಸಗಳಿಗೆ ತೆರಳಲು ಈ ಸೇತುವೆ ಮುಖ್ಯವಾಗಿದೆ.
ಯಾವಾಗ ಅಪಾಯ ಸಂಭಾವಿಸುತ್ತೋ ಗೊತ್ತಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಭಂದಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಈ ಸೇತುವೆ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
-ಮೌನೇಶ ಬಿ. ಮಂಗಿಹಾಳ, ಪಬ್ಲಿಕ್ ನೆಕ್ಸ್ಟ್ ಯಾದಗಿರಿ
PublicNext
01/08/2021 01:09 pm