ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ತಯಾರು ಕಾರ್ಯ ಚುರುಕು

ಬೆಂಗಳೂರು: ನೋಯ್ಡಾದಲ್ಲಿ ಸಿದ್ಧವಾಗುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಸ್ಥಾಪನೆ ಮಾಡಲು ಉದ್ದೇಶಿಸಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯ ನಿರ್ಮಾಣ ಕಾರ್ಯದ ಪ್ರಗತಿಯನ್ನು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಾಗೂ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ಅದನ್ನು ವೀಕ್ಷಿಸಿದರು.

ಪ್ರಸಿದ್ಧ ಕಲಾವಿದ ರಾಮ್ ಸುತಾರ್ ನೇತೃತ್ವದ ತಂಡ ಈ ಪ್ರತಿಮೆಯನ್ನು ನಿರ್ಮಿಸುತ್ತಿದೆ. ಮೊದಲ ಹಂತದಲ್ಲಿ ಥರ್ಮಾಕೋಲ್ ನಲ್ಲಿ ತಯಾರಿಸಿದ ಪ್ರತಿಮೆಯಲ್ಲಿ ಏನಾದರೂ ಬದಲಾವಣೆಗಳು ಇದ್ದರೆ ಆ ಸಂದರ್ಭದಲ್ಲೇ ಅದನ್ನು ಸರಿಪಡಿಸಲಾಗುತ್ತದೆ.ಅದೇ ಮಾದರಿಯನ್ನು ಇಟ್ಟುಕೊಂಡು ಕಂಚಿನ ಪ್ರತಿಮೆ ನಿರ್ಮಿಸಲಾಗುತ್ತದೆ.ಪ್ರತಿಮೆ ಪ್ರಗತಿಯನ್ನು ಸಚಿವರು ಮತ್ತು ಸ್ವಾಮೀಜಿ ಶನಿವಾರ ವೀಕ್ಷಿಸಿದರು.

23 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಹೆರಿಟೇಜ್ ಪಾರ್ಕ್ ನಲ್ಲಿ ಸೂಕ್ತ ಜಾಗದಲ್ಲಿ ಪ್ರತಿಮೆ ಸ್ಥಾಪಿಸಲು ಭೂಮಿ ಪೂಜೆ ಆಗಿದೆ. ಪ್ರತಿಮೆಯನ್ನು ಅಂತರರಾಷ್ಟ್ರೀಯ ಖ್ಯಾತಿಯ ಶಿಲ್ಪಿ ರಾಮ್ ಸುತಾರ್ ಕುಟುಂಬದವರು ನಿರ್ಮಿಸುತ್ತಿದ್ದಾರೆ. ಸ್ವಾಮೀಜಿ ಜೊತೆ ಅದರ ರೂಪುರೇಷೆಯನ್ನು ವೀಕ್ಷಿಸಿದ್ದೇನೆ' ಎಂದು ಅಶ್ವತ್ಥನಾರಾಯಣ ಹೇಳಿದರು. 3-4 ಹಂತದಲ್ಲಿ ಕೆಲಸ ಮುಗಿಯಲು 9-10 ತಿಂಗಳು ಬೇಕಾಗುತ್ತದೆ' ಎಂದು ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು.

Edited By : Nirmala Aralikatti
PublicNext

PublicNext

07/02/2021 07:51 am

Cinque Terre

39.77 K

Cinque Terre

1

ಸಂಬಂಧಿತ ಸುದ್ದಿ