ನವದೆಹಲಿ: ಭಾರತ-ಚೀನಾ ನಡುವಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆಯ ಬಳಿಯ ಭಾರತೀಯ ಭೂಭಾಗದಲ್ಲಿ ಚೀನಾ ತನ್ನದೆ ಗ್ರಾಮವೊಂದನ್ನು ನಿರ್ಮಿಸಿಕೊಂಡಿದೆ.
ಲಡಾಖ್ ಗಡಿಯಲ್ಲಿ ದೇಶಕ್ಕೆ ಉಪಟಳ ನೀಡುತ್ತಿರುವ ಚೀನಾ ಸದ್ದಿಲ್ಲದೆ ತ್ಸಾರಿಚು ನದಿ ಸಮೀಪ ಬರೋಬ್ಬರಿ 101 ಮನೆಗಳ ಹಳ್ಳಿಯನ್ನೇ ನಿರ್ಮಿಸಿದೆ. 2019ರ ಆಗಸ್ಟ್ ನಲ್ಲಿ ಖಾಲಿ ಇದ್ದ ಜಾಗದಲ್ಲಿ 2020ರ ನವೆಂಬರ್ ವೇಳೆಗೆ ಸುಮಾರು 101 ಮನೆಗಳಿರುವ ಹೊಸ ಗ್ರಾಮವನ್ನು ಚೀನಾ ನಿರ್ಮಿಸಿರುವುದನ್ನು ತೋರಿಸುವ ಉಪಗ್ರಹ ಚಿತ್ರಗಳು ತನಗೆ ದೊರಕಿವೆ ಎಂದು ndtv.com ವರದಿ ಮಾಡಿದೆ.
ವಿವಾದಿತ ಪ್ರದೇಶದಲ್ಲೇ ಚೀನಾ ಅಂದಾಜು 4.5 ಕಿಮೀ ಆಗಿದೆ ವ್ಯಾಪ್ತಿಯಲ್ಲಿ ಈ ಹಳ್ಳಿಯನ್ನು ನಿರ್ಮಿಸಿದೆ. ಈ ಮೂಲಕ ಗಡಿ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮಾಡುವ ಕೆಲಸವನ್ನು ಮಾಡಿದೆ.
ಗಡಿಯಲ್ಲಿ ಚೀನಾ ಈ ರೀತಿ ದುಸ್ಸಾಹಸ ನಡೆಸುತ್ತಿರುವುದು ಭಾರತದ ಪಾಲಿಗೆ ಬಹಳ ಗಂಭೀರ ವಿಚಾರವಾಗಿದೆ. ಈ ಜಾಗಕ್ಕಾಗಿ ಉಭಯ ರಾಷ್ಟ್ರಗಳ ನಡುವೆ ದೀರ್ಘ ಕಾಲದಿಂದ ವಿವಾದ ನಡೆಯುತ್ತಿದೆ. ಈ ಜಾಗವನ್ನು ಸಶಸ್ತ್ರ ಹೋರಾಟದ ಸ್ಥಳವೆಂದು ಗುರುತಿಸಲಾಗಿದೆ.
PublicNext
18/01/2021 06:53 pm