2020 ನೇ ವರ್ಷವನ್ನು ಮನುಕುಲ ಮರೆಯಲಾರದ ವರ್ಷ ಕಾರಣ ಕೊರೊನಾ ಎಂಬ ಮಹಾಮಾರಿಯ ಅಟ್ಟಹಾಸಕ್ಕೆ ನಲುಗದವರಿಲ್ಲ.
ಕೊರೊನಾ ಲಾಕ್ ಡೌನ್.. ಲಾಕ್ ಡೌನ್ ಟೈಮ್ ನಲ್ಲಿ ತಿಂಗಳಾನುಗಟ್ಟಲೇ ಗೃಹಬಂಧನದಲ್ಲಿದ್ದ ಜನ ಏನಾದ್ರೂ ತಿನ್ನಬೇಕು ಅಂತ ಅನ್ನಿಸಿದಾಗ ಥಟ್ ಅಂತ ಬಗೆ ಬಗೆಯ ಖಾದ್ಯಗಳು ನೆನಪಾಗಿರುತ್ತೆ.
ಆದ್ರೆ ಮಾಡೋಕೆ ಬೇಕಾದ ವಸ್ತುಗಳು ಸಿಗಲ್ಲ ಹಾಗೂ ಮಾಡಿಕೊಂಡು ತಿನ್ನುವಷ್ಟು ಸಮಾಧಾನವು ಯಾರಿಗೂ ಇರಲ್ಲ.
ಹಾಗಾಗಿ 2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲಾದ ಖಾದ್ಯ ಅಂದ್ರೆ ಅದು ಪಿಜ್ಜಾ. ಎಸ್ ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ಜಾಗಗಳಲ್ಲಿ ಜನರು ಅತ್ಯಧಿಕವಾಗಿ ಆರ್ಡರ್ ಮಾಡುವ ಖಾದ್ಯ ಪಿಜ್ಜಾ ಆಗಿದೆ ಎಂದು ಸಂಶೋಧನೆಗಳು ತಿಳಿಸಿವೆ.
ಬ್ರಿಟನ್ ಮೂಲದ ಮನಿಬೀಚ್ ಅನಲಿಟಿಕ್ಸ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ, ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಆರ್ಡಡ್ ಮಾಡಲ್ಪಟ್ಟ ಖಾದ್ಯ ಪಿಜ್ಜಾ ಆಗಿದೆ.
ಭಾರತ, ಅರ್ಜೆಂಟೀನಾ, ಈಜಿಪ್ಟ್, ಫ್ರಾನ್ಸ್, ಫಿನ್ಲೆಂಡ್, ಮೊರಕ್ಕೋ, ಸ್ಪೇನ್, ಜರ್ಮನಿ, ದಕ್ಷಿಣ ಕೊರಿಯಾಗಳಲ್ಲಿ ಪಿಜ್ಜಾವನ್ನು ಮನೆಗೆ ತರಿಸಿಕೊಂಡು ತಿನ್ನುವ ಟ್ರೆಂಡ್ ಜಾಸ್ತಿ ಇದೆ ಎಂದು ಸಮೀಕ್ಷೆ ತಿಳಿಸುತ್ತದೆ.
ಗೂಗಲ್ ನೆರವಿನಿಂದ ಸಂಗ್ರಹಿಸಿದ ದತ್ತಾಂಶದ ನೆರವಿನಿಂದ ಮನಿಬೀಚ್ ಈ ಮಾಹಿತಿ ಕೊಟ್ಟಿದೆ. ಜಗತ್ತಿನಾದ್ಯಂತ 44 ದೇಶಗಳಲ್ಲಿ ಸರ್ಚ್ ಮಾಡಲ್ಪಡುವ ಖಾದ್ಯಗಳಲ್ಲಿ ಪಿಜ್ಜಾವೇ ಟಾಪ್ ನಲ್ಲಿದೆ.
PublicNext
16/01/2021 06:03 pm