ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರಿಗರಿಗೆ ಸಂಕ್ರಾಂತಿ ಗಿಫ್ಟ್ ನೀಡಿದ್ದಾರೆ.
ಎರಡನೇ ಹಂತದಲ್ಲಿ ನಮ್ಮ ಮೆಟ್ರೋ ಕೈಗೆತ್ತಿಕೊಂಡಿರುವ ಕನಕಪುರ ರಸ್ತೆಯ ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆ ಮೆಟ್ರೋ ನಿಲ್ದಾಣದವರೆಗೂ ವಿಸ್ತರಿತ ಹಸಿರು ಮಾರ್ಗದ ಮೆಟ್ರೋ ರೈಲನ್ನು ಸಿಎಂ ಇಂದು ಉದ್ಘಾಟಿಸಿದರು. ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಅವರು 6 ಕಿ.ಮೀ. ಉದ್ದದ ಮೆಟ್ರೋ ಗ್ರೀನ್ ಲೈನ್ ಉದ್ಘಾಟನೆ ಮಾಡಿದರು. ಸಚಿವರಾದ ಆರ್.ಅಶೋಕ್, ಸುರೇಶ್ ಕುಮಾರ್, ಸದಾನಂದ ಗೌಡ ಹಾಗೂ ವಿಶ್ವನಾಥ್ ಭಾಗಿಯಾಗಿದ್ದರು.
ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗೂ ನಿರ್ಮಾಣವಾಗಿರುವ ಮೆಟ್ರೋ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಮಾರ್ಗದಲ್ಲಿ ಕೋಣಕೊಂಟೆ ಕ್ರಾಸ್, ಕೃಷ್ಣ ಲೀಲಾ ಪಾರ್ಕ್, ವಾಜರಹಳ್ಳಿ, ತಲಗಟ್ಟಪುರ, ಅಂಜನಪುರ ಟೌನ್ ಶಿಪ್ ಎಂಬ ಐದು ಎಲಿವೇಟೆಡ್ ನಿಲ್ದಾಣ ನಿರ್ಮಾಣ ಮಾಡಲಾಗಿದೆ. ಈ ಮಾರ್ಗವು ಜನವರಿ 15 ರಿಂದ ಜನ ಬಳಕೆಗೆ ಲಭ್ಯವಾಗಲಿದೆ.
PublicNext
14/01/2021 07:28 pm