ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸಾನ್ ಫ್ರಾನ್ಸಿಸ್ಕೊಗೆ ತಡೆ ರಹಿತ 15,553 ಕಿ.ಮೀ ಪ್ರಯಾಣಿಸಿ ಭಾರತೀಯ ವಿಮಾನ ಏರ್ ಇಂಡಿಯಾ ದಾಖಲೆ ಬರೆದಿದೆ. ಮತ್ತೊಂದು ವಿಶೇಷವೆಂದರೆ ಈ ವೇಳೆ ಕನ್ನಡ ಡಿಂಡಿಮ ಮೊಳಗಿದೆ.
ಬೋಯಿಂಗ್ 777-200 ಲಾಂಗ್ ರೇಂಜ್ ವಿಮಾನವು ಸೋಮವಾರ ಮುಂಜಾನೆ 220 ಪ್ರಯಾಣಿಕರು ಹೊತ್ತು ಸಾನ್ ಫ್ರಾನ್ಸಿಸ್ಕೊಗೆ ಪ್ರಯಾಣ ಆರಂಭಿಸಿತ್ತು. ಮಂಗಳವಾರ ಸಂಜೆ 4:55ಕ್ಕೆ (ಭಾರತೀಯ ಕಾಲಮಾನ ಬೆಳಗಿನ ಹೊತ್ತು 6:25ಕ್ಕೆ) ತಲುಪಿದೆ. ವಿಮಾನದಲ್ಲಿ ಕಮಾಂಡರ್ ಸಿ.ವಿ.ಸಿಂಧು, ಕ್ಯಾಪ್ಟನ್ ದಿಲೀಪ್ ಡೆಸ್ಮೊಂಡ್, ಕ್ಯಾಪ್ಟನ್ ಕರನ ಅಗರ್ವಾಲ್ ಮತ್ತು ಸಹ ಪೈಲಟ್ ಸಿಮ್ರಂಜಿತ್ ಸಿಂಗ್ ಕೂಡ ಇದ್ದರು.
ಈ ಬಗ್ಗೆ ಮಾತನಾಡಿದ ಬೆಂಗಳೂರು ಮೂಲದ ವಿಮಾನ ಕಮಾಂಡರ್ ಸಿ.ವಿ.ಮಧು, ಪಬ್ಲಿಕ್ ಅನೌನ್ಸ್ ಮೆಂಟ್ ವ್ಯವಸ್ಥೆಯಲ್ಲಿ ವಿಮಾನ ಹಾರಾಟ ಮಾಡುವಾಗ ಪ್ರಯಾಣಿಕರೊಂದಿಗೆ ನಾನು ಸಂಪೂರ್ಣವಾಗಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ. ಇದು ಪ್ರಯಾಣಿಕರಿಗೆ ಅಚ್ಚರಿ ಹಾಗೂ ಖುಷಿಯನ್ನು ಉಂಟುಮಾಡಿತ್ತು. ಕೊನೆಯಲ್ಲಿ ಜೈ ಹಿಂದ್, ಜೈ ಕರ್ನಾಟಕ ಎಂದು ಕನ್ನಡದಲ್ಲಿ ಹೇಳಿ ಮುಗಿಸಿದೆ. ನಂತರ ಇಂಗ್ಲಿಷ್, ಹಿಂದಿಯಲ್ಲಿ ಮಾತನಾಡಿದೆ ಎಂದು ಹೇಳಿದ್ದಾರೆ.
PublicNext
13/01/2021 04:31 pm