ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು : ಕಣ್ಣುಮುಚ್ಚಿ ಕೂತಿದಿಯಾ ಕೊರಟಗೆರೆ ಪಟ್ಟಣ ಪಂಚಾಯಿತಿ!!!?

ಕೊರಟಗೆರೆ: ಪಟ್ಟಣದ ಬೋಡಬಂಡೇನಹಳ್ಳಿ ರಸ್ತೆಯ ಸೇತುವೆ ಬಳಿಯ ಸುವರ್ಣಮುಖಿ ನದಿ ಹಳ್ಳಕ್ಕೆ ಮಧ್ಯದಂಗಡಿಗೆ ಅವರು ಉಪಯೋಗಿಸಿದ ಪ್ಲಾಸ್ಟಿಕ್ ಹಾಗೂ ಮಧ್ಯದ ಬಾಟಲಿಗಳು ಮತ್ತು ಆಸ್ಪತ್ರೆಯ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ

ಕೊರಟಗೆರೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇದನ್ನು ತಡೆಗಟ್ಟಲು ಕ್ರಮ ಕೈಗೊಳ್ಳೋದೆ ನಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಕಣ್ಣು ಮುಚ್ಚಿ ಕೂತಿದ್ದಾರೆ.

ಸುವರ್ಣಮುಖಿ ನದಿ ಪಾತ್ರಕ್ಕೆ ಆಗಿರುವಂತಹ ತ್ಯಾಜ್ಯವು ಈಗ ಜಂಪೇನಹಳ್ಳಿ ಕೋಡಿ ಬಿದ್ದಿರುವುದು ಹಿನ್ನೆಲೆಯಲ್ಲಿ ತ್ಯಾಜ್ಯ ನದಿಯಲ್ಲಿ ಮಿಶ್ರಣಗೊಂಡು ಹರಿಯುತ್ತಿದ್ದು ಪರಿಸರ ಹಾನಿಗೆ ಎಡೆಮಾಡಿಕೊಟ್ಟಿದೆ. ತಪ್ಪಿತಸ್ಥರ ವಿರುದ್ಧ ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘನೆ ಆಧಾರದ ಮೇಲೆ ದಂಡ ಇರಿಸಬೇಕು, ಇನ್ನು ಮುಂದೆ ಈ ರೀತಿ ಆಗದಂತೆ ಕ್ರಮ ವಹಿಸಬೇಕು, ಕಾನೂನು ಎಂದರೆ ಎಲ್ಲರಿಗೂ ಒಂದೇ ಆಗಿರಬೇಕು, ಪಟ್ಟಣ ಪಂಚಾಯಿತಿ ಕಚೇರಿಯ ತೂಗಳತೆ ದೂರದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದ್ದು ಅಧಿಕಾರಿಗಳು ಯಾವ ರೀತಿಯ ಕ್ರಮವನ್ನು ಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.

ವರದಿ: ರಾಘವೇಂದ್ರ ದಾಸರಹಳ್ಳಿ

Edited By : Nagesh Gaonkar
PublicNext

PublicNext

01/08/2022 12:53 pm

Cinque Terre

27.55 K

Cinque Terre

0

ಸಂಬಂಧಿತ ಸುದ್ದಿ