ಮಂಡ್ಯ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆಯ ಕಳೆಪೆ ಕಾಮಗಾರಿ ಜಗಜ್ಜಾಹೀರಾಗಿದೆ.
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ ಕಾಮಗಾರಿನ ದಿಲೀಪ್ ಬಿಲ್ಡ್‌ಕಾನ್ ಸಂಸ್ಥೆ ನಿರ್ವಹಿಸುತ್ತಿದೆ.ಮಂಡ್ಯ ಸಮೀಪದ ಹೊಸಬೂದನೂರು ಬಳಿ ಅವೈಜ್ಞಾನಿಕವಾಗಿ ರಾಜಕಾಲುವೆ ಮುಚ್ಚಿದ ಪರಿಣಾಮ ಕೆರೆ ಹೊಡೆದು ರೈತರ ಜೀವನ ರಸ್ತೆಗೆ ಬಂದಿದೆ.
ಹೆದ್ದಾರಿ ಜಲಾವೃತವಾಗಿ ಬೆಂಗಳೂರು ಮೈಸೂರು ಹೆದ್ದಾರಿ ಸಂಚಾರ ಬಂದ್ ಮಾಡಲಾಗಿದೆ. ಮುನ್ನೆಚ್ಚರಿಕೆ ಇಲ್ಲದೆ ಕಾಮಗಾರಿ ಮಾಡ್ತಿರುವುದು ಇದಕ್ಕೆ ಕಾರಣವಾಗಿದೆ. ಬೂದನೂರು ಕೆರೆ ಒಡೆದು ಸುಮಾರು 300 ರಿಂದ 500 ಎಕರೆ ಕೃಷಿ ಜಮೀನಿಗೆ ನೀರು ನುಗ್ಗಿ, ರೈತರಿಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ.
ಕೆರೆ ಸಮೀಪ ರಾಜಕಾಲುವೆ ಮುಚ್ಚಿ ವಿಸ್ತಾರವಾಗಿದ್ದ ಕಾಲುವೆನ ಸಣ್ಣದಾಗಿ ನಿರ್ಮಾಣ ಮಾಡದ್ದೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ. ಕೋಡಿ ನೀರು ಸರಾಗವಾಗಿ ಹರಿದು ಹೋಗಲಾರದೆ ಕೆರೆ ಹೊಡೆಯಲು ಕಾರಣ ಎಂದು ರೈತರು ಆರೋಪಿಸಿದ್ದಾರೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು, ಅವೈಜ್ಞಾನಿಕ ಕಾಮಗಾರಿಗೆ ಬ್ರೇಕ್ ಹಾಕಬೇಕು. ಇಲ್ಲವಾದರೆ ಬೆಂಗಳೂರು ಮೈಸೂರು ಹೆದ್ದಾರಿ ಮುಂದಿನ ಮಳೆಲಿ ಮತ್ತಷ್ಟು ಅದ್ವಾನ ಆಗ್ತದೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ನ್ಯೂಸ್ ಡೆಸ್ಕ್
PublicNext
02/08/2022 11:21 pm