ಮುಲ್ಕಿ: ಕಳೆದ ಕೆಲವು ದಿನಗಳಿಂದ ತೀವ್ರ ವಿವಾದಕ್ಕೆ ಒಳಗಾಗಿದ್ದ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಬಸ್ಸು ನಿಲ್ದಾಣದ ಬಳಿಯಲ್ಲಿ ಮೀನು ಮಾರಾಟ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು ಬುಧವಾರ ಸಂಜೆ ಏಕಾಏಕಿ ಮುಲ್ಕಿ ಪೊಲೀಸರು, ಟ್ರಾಫಿಕ್ ಪೊಲೀಸರ ನೆರವಿನೊಂದಿಗೆ ಹಳೆಯಂಗಡಿ ಹೆದ್ದಾರಿ ಬದಿಯಲ್ಲಿ ಮೀನು ಮಾರಾಟಕ್ಕೆ ತಡೆಯೊಡ್ಡಿ ಸ್ಥಳದಿಂದ ತೆರವುಗೊಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಹಳೆಯಂಗಡಿ ಹೆದ್ದಾರಿ ಬದಿಯ ಮೀನು ಮಾರಾಟ ವಿವಾದದ ಸ್ಥಳಕ್ಕೆ ಪಂಚಾಯತ್ ಅಧ್ಯಕ್ಷರು ಭೇಟಿ ನೀಡಿ ಪರಿಶೀಲಿಸಿದ್ದರು. ಈ ಸಂದರ್ಭ ಮೀನು ಮಾರಾಟಗಾರರು ತಮಗೆ ಮೀನು ಮಾರಾಟ ಮಾಡಲು ಅವಕಾಶ ನೀಡುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.
ಆದರೆ ಹೆದ್ದಾರಿ ಬದಿ ಮೀನು ಮಾರಾಟ ಮಾಡಲು ಕೆಲವರ ಆಕ್ಷೇಪದ ಹಿನ್ನೆಲೆಯಲ್ಲಿ ಮುಲ್ಕಿ ಪೊಲೀಸರು ಹಾಗೂ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರ ನೇತೃತ್ವದಲ್ಲಿ ಬುಧವಾರ ಸಂಜೆ ಮೀನು ಮಾರಾಟಗಾರರನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.
PublicNext
18/11/2021 07:13 am