ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಹಣ ನೀಡಿದರೆ ಮಾತ್ರ ಹೆರಿಗೆ ಅಂತೆ !

ಗೋಕಾಕ: ವೈದ್ಯೋ ನಾರಾಯಣ ಹರಿ ಅಂತ ನಂಬಿರುವ ವೈದ್ಯರು ಎಲ್ಲೋ ಒಂದು ಕಡೆ ಹಣದ ಹಿಂದೆ ಬಿದ್ದಿದ್ದಾರಾ ಅನ್ನೊದಕ್ಕೆ ಗೋಕಾಕ ಸರಕಾರಿ ಆಸ್ಪತ್ರೆಯಲ್ಲಿ ಒಂದು ಘಟನೆ ನಡೆದಿದೆ.

ಹೌದು.ಹಣವಂತರು ತಮ್ಮ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಹೋಗುತ್ತಾರೆ. ಬಡವರು,ನಿರ್ಗತಿಕರಿಗೆ ಸರಕಾರಿ ಆಸ್ಪತ್ರೆನೇ ಎಲ್ಲಾ ಆಗಿರುತ್ತದೆ. ಎಲ್ಲಾ,ಹಾಗಿರುವಾಗ ಸರಕಾರಿ ಆಸ್ಪತ್ರೆಯಲ್ಲಿಯೆ ದಿನಾಲು ಚಿಕಿತ್ಸೆಗೆ ಮತ್ತು ಹೆರಿಗೆ ಮಾಡಿಸಿಕೊಳ್ಳಲು ಬರುವಂತಹ ಕುಟುಂಬದವರ ಹತ್ತಿರ ಆಶಾ ಕಾರ್ಯಕರ್ತರು ಯಾವ ರೀತಿ ಹಣ ವಸೂಲಿ ಮಾಡುತಿದ್ದಾರೆಂದರೆ.

ಇದೇನು ಸರಕಾರಿ ಆಸ್ಪತ್ರೆನಾ ಅಥವಾ ಖಾಸಗಿ ಆಸ್ಪತ್ರೆನಾ ತಿಳಿಯುತ್ತಿಲ್ಲ. ಗರ್ಭಿಣಿಯೊಬ್ಬರು ಹೆರಿಗೆಗೆ ಅಂತ ಬಂದರೆ ಆಶಾ ಕಾರ್ಯಕರ್ತೆಯೊಬ್ಬಳು ಹೆರಿಗೆ ಮಾಡಿಸಲಿಕ್ಕೆ ಹಣ ವಸೂಲಿ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು,ಈ ಹಣ ಆಶಾ ಕಾರ್ಯಕರ್ತೆಗೆನಾ ಅಥವಾ ಅವರ ಮುಖಾಂತರ ವೈದ್ಯರು ವಸೂಲಿ ಮಾಡುತಿದ್ದಾರಾ ಅನ್ನೊದು ತಿಳಿಯುತ್ತಿಲ್ಲಾ.

ಏನೆ ಆಗಲಿ ಸರಕಾರದ ಹತ್ತಿರ ನಮಗೆ ಅದನ್ನು ಕೊಡಿ, ಇದನ್ನು ಕೊಡಿ ಅಂತ ಪ್ರತಿಭಟನೆ ಮಾಡೊ ಈ ಆಶಾ ಕಾರ್ಯಕರ್ತರಿಗೆ ಸರಕಾರ ನೀಡೋ ಗೌರವ ದನ ಸಾಕಾಗಿಲ್ಲ ಅಂತ ಕಾಣುತ್ತದೆ. ಅದಕ್ಕೆ ಈ ರೀತಿ ಹೆರಿಗೆಗೆ ಬರುವವರ ಹತ್ತಿರ ಹಣ ವಸೂಲಿ ಮಾಡಿದ್ದಾರೆ.

ಇಷ್ಟಾದರೂ ಸಹ ಇಲ್ಲಿನ ವೈದ್ಯಾಧಿಕಾರಿಗಳು ಇವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದರಿಂದ ಇವರಿಗೂ ಇದರಲ್ಲಿ ಪಾಲು ಇದೆಯಾ ಅನ್ನೊ ಸಂಶಯ ಉಂಟಾಗಿದೆ.

Edited By :
PublicNext

PublicNext

17/06/2022 12:28 pm

Cinque Terre

78.32 K

Cinque Terre

10

ಸಂಬಂಧಿತ ಸುದ್ದಿ