ಬೆಂಗಳೂರು: ಬ್ರಿಟಿಷ್ ಏರ್‌ವೇಸ್ ಎಮಿರೇಟ್ಸ್, ಸಿಂಗಾಪುರ ಏರ್‌ಲೈನ್ಸ್ ನೀಡುವ ಕನ್ನಡ ಸೇವೆ ಇಂಡಿಗೋದಲ್ಲಿ ಯಾಕೆ ಇಲ್ಲ ಎಂದು ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅಸಮಾಧಾನ ಹೊರಹಾಕಿದ್ದಾರೆ.
ಎಲ್.ಕೆ.ಅತೀಕ್ ಬುಧವಾರ ಬೆಂಗಳೂರಿನಿಂದ ಬೆಳಗಾವಿಗೆ ಇಂಡಿಗೋ ವಿಮಾನದಲ್ಲಿ ತೆರಳಿದ್ದರು. ಈ ವೇಳೆ ವಿಮಾನದೊಳಗೆ ಉದ್ಘೋಷಕರು ಕನ್ನಡ ಬಳಸದೇ ಇರುವ ಕುರಿತು ಪ್ರಶ್ನೆ ಎತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕರ್ನಾಟಕದಲ್ಲಿ ಇಂಡಿಗೋ ಹಾಗೂ ಇತರ ಕಂಪನಿಗಳಿಗೆ ಕನ್ನಡದಲ್ಲಿ ಸೇವೆ ನೀಡಲು ಇರುವ ಸಮಸ್ಯೆಯಾದರೂ ಏನು' ಎಂದು ಪ್ರಶ್ನಿಸಿದ್ದಾರೆ.
ಅತೀಕ್ ಅವರಿಗೆ ಅನೇಕ ನೆಟ್ಟಿಗರು, ಕನ್ನಡಿಗರು ಬೆಂಬಲ ಸೂಚಿಸಿದ್ದಾರೆ. ನೆಟ್ಟಿಗರೊಬ್ಬರು ಸಿಂಗಾಪುರ ಏರ್‌ಲೈನ್‌ನಲ್ಲಿ ಆಹಾರದ ಮೆನು ಕೂಡ ಕನ್ನಡದಲ್ಲಿ ಇರುವುದನ್ನು ಫೋಟೋ ಸಹಿತ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ವಿಮಾನಯಾನ ಸಂಸ್ಥೆಗಳು ಆಯಾ ರಾಜ್ಯದವರನ್ನೇ ಸಿಬ್ಬಂದಿ ಆಗಿ ನೇಮಿಸಿಕೊಳ್ಳಲಿ, ಇಲ್ಲವಾದರೆ ಆ ತಂಡದಲ್ಲಿ ಒಬ್ಬರಾದರೂ ಆಯಾ ರಾಜ್ಯದವರು ಇರಲಿ. ಇದೇನು ಕಷ್ಟದ ಕೆಲಸವಲ್ಲ ಎಂದು ಕುಟುಕಿದ್ದಾರೆ.
PublicNext
16/12/2020 08:20 pm