ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಸ್ತೆ ಗುಂಡಿ ರಿಪೇರಿ ಆಗುವವರೆಗೂ 50%ರಷ್ಟು ಟೋಲ್ ಕಡಿತ

ನಮ್ಮ ದೇಶದ ರಸ್ತೆಗಳಲ್ಲಿ ಗುಂಡಿಗಳಿಗೇನು ಕಡಿಮೆ ಇಲ್ಲ. ಎಲ್ಲ ರಾಜ್ಯಗಳಲ್ಲೂ ಈ ಸಮಸ್ಯೆ ಇದ್ದದ್ದೇ. ಇದರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇರುತ್ತಾರೆ. ಹಲವು ಸವಾರರು ಇದೇ ರಸ್ತೆ ಗುಂಡಿಗೆ ಬಲಿಯಾಗಿದ್ದಾರೆ. ಇದೀಗ ಮೈದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ರಸ್ತೆ ಗುಂಡಿ ಸರಿ ಪಡಿಸುವವರೆಗೆ ಟೋಲ್ ಪ್ಲಾಜಾದಲ್ಲಿ ಶೇಕಡಾ 50 ರಷ್ಟು ಮಾತ್ರ ಫೀ ಪಡೆಯಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿದ ಬಳಿಕ ಮದ್ರಾಸ್ ಹೈಕೋರ್ಟ್ ಈ ಆದೇಶ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ(NHAI) ಸೇರಿದ ಮದುರಾವೊಯಲ್ ಹಾಗೂ ವಲಜಾಪೇಟ್ ನಡುವಿನ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಇದೇ ರಸ್ತೆಯ ರಸ್ತೆಗುಂಡಿಗೆ ಬಿದ್ದು ವೈದ್ಯೆಯೊಬ್ಬರು ಸಾವನ್ನಪ್ಪಿದ್ದರು. ಈ ಪ್ರಕರಣವನ್ನು ಮದ್ರಾಸ್ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಮದುರಾವೊಯಲ್ ಹಾಗೂ ವಲಜಾಪೇಟ್ ರಸ್ತೆಯಲ್ಲಿರುವ 2 ಟೋಲ್ ಪ್ಲಾಜಾಗಳಲ್ಲಿ ಶೇಕಡಾ 50 ರಷ್ಟು ದರ ಕಡಿತ ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚವವರೆಗೆ ಇದೇ ಬೆಲೆ ಇರಲಿದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.

Edited By : Nagaraj Tulugeri
PublicNext

PublicNext

11/12/2020 07:23 pm

Cinque Terre

69.79 K

Cinque Terre

5

ಸಂಬಂಧಿತ ಸುದ್ದಿ