ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇನ್ಮುಂದೆ ವಾಟ್ಸ್ಆ್ಯಪ್ ನಲ್ಲಿಯೂ ಮಾಡಿ ಆನ್ಲೈನ್ ಪೇಮೆಂಟ್

ಆನ್ ಲೈನ್ ಪೇಮೆಂಟ್ ಬಂದಾಗಿನಿಂದ ನಗದು ರಹಿತ ವ್ಯವಹಾರ ವ್ಯಾಪಕವಾಗಿ ಬೆಳೆದಿದೆ. ಅದಕ್ಕಾಗಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ, ಅಮೆಝಾನ್ ಪೇ ಸೇರಿದಂತೆ ಇನ್ನೂ ಹಲವು ಆ್ಯಪ್ ಗಳು ಈಗಾಗಲೇ ಚಾಲ್ತಿಯಲ್ಲಿವೆ.

ಈಗ ಅದರ ಪಟ್ಟಿಗೆ ಫೇಸ್ ಬುಕ್ ಒಡೆತನದ ವಾಟ್ಸ್ಆ್ಯಪ್ ಕೂಡ ಸೇರಿಕೊಂಡಿದೆ. ಅಂದ್ರೆ ಇನ್ಮುಂದೆ ನೀವು ವಾಟ್ಸ್ಆ್ಯಪ್ ಮೂಲಕವೇ ಆನ್ಲೈನ್ ಪೇಮೆಂಟ್ ಮಾಡಬಹುದಾಗಿದೆ‌. ಇ‌ತದ್ದೊಂದು ಆಯ್ಕೆಯನ್ನ ವಾಟ್ಸ್ಆ್ಯಪ್ ತನ್ನ ಬಳಕೆದಾರರಿಗೆ ನೀಡಿದೆ.

ನ್ಯಾಶನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (NPCI) ಅನುಮೋದನೆಯನ್ನ ವಾಟ್ಸ್ಆ್ಯಪ್ ಪೇ ಪಡೆದುಕೊಂಡಿದೆ‌. ಮತ್ತು ಪರೀಕ್ಷಾರ್ಥವಾಗಿ ಇದನ್ನ ಹಲವು ವರ್ಷ ಬಳಕೆ ಮಾಡಿದ್ದ ವಾಟ್ಸ್ಆ್ಯಪ್ ಸಂಸ್ಥೆ ನಂತರ ತನ್ನ ಬಳಕೆದಾರರಿಗೆ ನೀಡಿದೆ.

ವಾಟ್ಸ್ಆ್ಯಪ್ ಪೇ ಬಳಕೆ ಶುರು ಮಾಡಲು ಹೀಗೆ ಮಾಡಿ.

ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ, ವಾಟ್ಸಪ್ ಲೇಟೆಸ್ಟ್ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಳ್ಳಿ.

ಬಳಿಕ ವಾಟ್ಸಪ್ ತೆರೆದು, ಪೇಮೆಂಟ್ ಎಂದಿರುವುದನ್ನು ಸೆಲೆಕ್ಟ್ ಮಾಡಿ.

ಕಂಟಿನ್ಯೂ ಎಂದು ಕೊಟ್ಟು, ಡೆಬಿಟ್ ಕಾರ್ಡ್ ಆಯ್ಕೆ ಮಾಡಿ.

ಈಗ ನಿಮ್ಮ ಡೆಬಿಟ್ ಕಾರ್ಡ್ ವಿವರ ಭರ್ತಿ ಮಾಡಿ, ಎಕ್ಸ್‌ಪೈರಿ ದಿನಾಂಕ ಕೂಡ ನಮೂದಿಸಿ.

ಡನ್ ಕೊಡಿ.

Edited By : Nagaraj Tulugeri
PublicNext

PublicNext

06/11/2020 11:30 am

Cinque Terre

75.89 K

Cinque Terre

1

ಸಂಬಂಧಿತ ಸುದ್ದಿ