ಅಥಣಿ : ತುಂಗಳ ಸೊಸೈಟಿಯಿಂದ ಯಾವುದೇ ರೀತಿ ಕಳಪೆ ಬೀಜ, ರಸಗೊಬ್ಬರ ಅಥವಾ ಔಷಧಿ ವಿತರಣೆಯಾಗಿಲ್ಲವೆಂದು ಸಂಘದ ಮಾಜಿ ಅಧ್ಯಕ್ಷ ಚಿದಾನಂದ ಬಿರಾದಾರ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನ ಕೊಕಟನೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಟ್ಟಟ್ಟಿ ಗ್ರಾಮದ ರೈತ ಮಾಡಿದ ಆರೋಪ ನಿರಾಧಾರ. ರೈತರ ಏಳಿಗೆಯೇ ನಮ್ಮ ಮೊದಲ ಧ್ಯೇಯ, ನಮ್ಮ ಸಂಘಕ್ಕೆ ಕಪ್ಪುಚುಕ್ಕೆ ಬರದೆ ಹಾಗೆ ನಾವು ಕೆಲಸ ಮಾಡುತ್ತಿದ್ದೇವೆ. ರೈತನ ಆರೋಪದಂತೆ ಸಂಬಂಧಪಟ್ಟ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿದ್ದಾರೆ ಅದರ ವರದಿ ಶೀಘ್ರ ಬರಲಿದೆ ಎಂದರು.
ಸಂಘದ ನಿರ್ದೇಶಕ ಶೌಕತ್ಅಲಿ ಮಾತನಾಡಿ ರೈತನ ಆರೋಪದಂತೆ ಈಗಾಗಲೇ ಕೃಷಿ ಇಲಾಖೆಗೆ ನಾವೂ ಸಹ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ. ಇನ್ನೋರ್ವ ರೈತ ಮುತ್ತಣ್ಣ ಹಿಡಕಲ್ ಮಾತನಾಡಿ ಕಳೆದ 20 ವರ್ಷಗಳಿಂದ ನಾನು ಅದೇ ಸಂಘದ ಗ್ರಾಹಕನಾಗಿದ್ದು, ಇಲ್ಲಿಯವರೆಗೆ ಈ ಸಂಘದಿಂದ ಯಾವದೇ ಕಳಪೆ ಬೀಜ ಔಷಧಿ ನೀಡಿದ ಉದಾಹರಣೆ ಇಲ್ಲ ಎಂದಿದ್ದಾರೆ. ಈ ವೇಳೆ ಸೋಮರಾಯ ಮಾಳಗೊಂಡ, ಲಕ್ಷ್ಮಣ ಕರೋಶಿ, ಎಸ್ ಎಸ್ ಇಟ್ನಾಳ, ಗಿರೀಶ ಹಳಿಂಗಳಿ, ಎನ್ ವಿ ಮಲಾಬಾದ ಸೇರಿದಂತೆ ಇತರರು ಉಪಸ್ಥಿತರಿದ್ದರು.
PublicNext
21/08/2022 07:02 pm