ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ಪೊಲೀಸಪ್ಪನ ಜೊತೆ ಊಟ ಮಾಡಿದ ಕೋತಿ: ಪ್ರಾಣಿಪ್ರೀತಿಗೆ ಜನರ ಮೆಚ್ಚುಗೆ

ಗದಗ: ಪ್ರಾಣಿಗಳಿಗೆ ಮಾತನಾಡೋಕೆ ಬಾಯಿ ಇಲ್ಲ. ಮೂಕವಾಗಿರ್ತಾವೆ ಅನ್ನೋದಷ್ಟೆ ಬಿಟ್ಟರೆ ಮನುಷ್ಯನಿಗಿಂತ ಭಾವನಾತ್ಮಕ ಜೀವಿ ಅನ್ನೋದರಲ್ಲಿ ಪ್ರಾಣಿಗಳು ಮೊದಲಿನ ಸ್ಥಾನದಲ್ಲಿ ಬರುತ್ತವೆ.

ಇಂಥಹದೇ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಅದರಲ್ಲೂ ಮನುಷ್ಯನ ಆಕಾರವನ್ನೇ ಹೋಲುವ, ವಾನರ(ಕೋತಿ) ಇತ್ತೀಚೆಗಂತೂ ಕಾಡು ಬಿಟ್ಟು ನಾಡಿಗೆ ಲಗ್ಗೆ ಇಟ್ಟಿವೆ. ದಿನಬೆಳಗಾದ್ರೆ ಸಾಕು ಆಯಾ ಏರಿಯಾಗಳಲ್ಲಿ ಮನೆಯಲ್ಲಿನ ಗೃಹಿಣಿಯರಿಗೆ ವಾನರ ಸೈನ್ಯದ್ದೇ ದೊಡ್ಡ ಕಿರಿಕಿರಿ ಯಾಗಿರುತ್ತೆ.‌ ಆದರೆ ಇಲ್ಲೊಂದು ಘಟನೆ ಇದಕ್ಕೆಲ್ಲ ಅಪವಾದವೆಂಬಂತಿದೆ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿ ಕಪ್ಪತ್ತಗುಡ್ಡದ ಕಪ್ಪತ್ತಮಲ್ಲಯ್ಯನ ಜಾತ್ರೆ ಪ್ರತಿವರ್ಷ ಶ್ರಾವಣ ಮಾಸದಲ್ಲಿ ನಡೆಯುತ್ತೆ. ಜಾತ್ರೆಗೆ ಬಂದೋಬಸ್ತಿಗೆಂದು ಶಿರಹಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ತೆರಳಿದ್ದರು. ಮಧ್ಯಾಹ್ನ ಊಟದ ಸಮಯಕ್ಕೆ ಪೊಲೀಸ್ ಸಿಬ್ಬಂದಿ ತಾವು ತಂದಿದ್ದ ಬುತ್ತಿಯನ್ನ ಬಿಚ್ಚಿ ಊಟ ಮಾಡೋಕೆ ಶುರು ಮಾಡಿದ್ದಾರೆ.

ತಕ್ಷಣ ಅಲ್ಲಿಯೇ ಸುತ್ತಾಡುತ್ತಿದ್ದ ಮಂಗವೊಂದು ಇವರ ಬಳಿ ಬಂದು ಸೀದಾ ತಟ್ಟೆಗೆ ಕೈ ಹಾಕಿ ತಾನೂ ಸಹ ತುತ್ತು ತಿನ್ನೋಕೆ ಶುರು ಮಾಡಿದೆ. ಈ‌ ಕೋತಿ ಹಾಗೂ ಪೊಲೀಸಪ್ಪನ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಪೊಲೀಸಪ್ಪನ ಪ್ರಾಣಿ ಪ್ರೀತಿಗೆ ಮೆಚ್ಚುಗೆ ವ್ಯಕ್ತವಾಗಿದೆ.

Edited By : Manjunath H D
PublicNext

PublicNext

19/08/2022 05:28 pm

Cinque Terre

74.35 K

Cinque Terre

9