ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತೀಯ ಷೇರು ಮಾರುಕಟ್ಟೆಯ 'ಬಿಗ್ ಬುಲ್ ಆಫ್ ಇಂಡಿಯಾ' ರಾಕೇಶ್ ಜುಂಜುನ್ ವಾಲಾ ಇನ್ನಿಲ್ಲ

ಮುಂಬೈ: ಷೇರು ಮಾರುಕಟ್ಟೆಯ ಕಿಂಗ್ ಎಂದೇ ಖ್ಯಾತಿ ಪಡೆದಿದ್ದ, ಬಿಲಿಯನೇರ್ ಉದ್ಯಮಿ ರಾಕೇಶ್ ಜುಂಜುನ್ ವಾಲಾ (62) ಇಂದು ಭಾನುವಾರ ಬೆಳಿಗ್ಗೆ ನಿಧನರಾದರು.ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅವರು ಇಂದು ಇಹಲೋಕ ತೇಜಿಸಿದ್ದಾರೆ.

1960ರಲ್ಲಿ ಹೈದರಾಬಾದ್ ನಲ್ಲಿ ಜನಿಸಿದ ರಾಕೇಶ್ ಜುಂಜುನ್ವಾಲಾ, 1985ರಲ್ಲಿ ಶೇರು ಮಾರುಕಟ್ಟೆಗೆ ಕಾಲಿಟ್ಟರು. 5000 ರೂ ನಿಂದ ವಹಿವಾಟು ಆರಂಭಿಸಿದ್ದ ರಾಕೇಶ್ 11 ಸಾವಿರ ಕೋಟಿ ರೂ. ವಹಿವಾಟು ನಡೆಸುವಷ್ಟು ಬೆಳೆದಿದ್ದರು.

ಸಕ್ರಿಯ ಹೂಡಿಕೆದಾರರಾಗಿರುವ ಜುಂಜುನ್ ವಾಲಾ ಅವರು ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್ ಟೈನ್ ಮೆಂಟ್ ಪ್ರೈವೇಟ್ ನ ಅಧ್ಯಕ್ಷರಾಗಿದ್ದಾರೆ. ಷೇರು ಮಾರುಕಟ್ಟೆಯ ತನ್ನ ಹಿಡಿತದ ಕಾರಣದಿಂದ ರಾಕೇಶ್ ಜುಂಜುನ್ ವಾಲಾ ಅವರನ್ನು 'ಬಿಗ್ ಬುಲ್ ಆಫ್ ಇಂಡಿಯಾ' ಮತ್ತು 'ಕಿಂಗ್ ಆಫ್ ಬುಲ್ ಮಾರ್ಕೆಟ್' ಎಂದು ಕರೆಯಲಾಗುತ್ತದೆ.

ಇತ್ತೀಚೆಗಷ್ಟೇ ಅವರು ಆಕಾಶ ಏರ್ ಎಂಬ ವಿಮಾನಯಾನ ಸಂಸ್ಥೆಯನ್ನು ಆರಂಭಿಸಿದ್ದರು. ಆಗಸ್ಟ್ 7ರಂದು ಇದರ ಮೊದಲ ಹಾರಾಟ ನಡೆದಿತ್ತು.

Edited By : Nirmala Aralikatti
PublicNext

PublicNext

14/08/2022 09:59 am

Cinque Terre

61.13 K

Cinque Terre

12