ಬೆಂಗಳೂರು: ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನ್ನನ್ನು ಬಿಟ್ಟಿರಲಾರದೇ. ನೋಟವೊಂದರ ಮೇಲೆ ತನ್ನ ಪರಿಸ್ಥಿತಿಯನ್ನು ಬರೆದಿರುವ 10 ರೂ.ಮುಖಬೆಲೆಯ ನೋಟೊಂದು ಭಾರೀ ವೈರಲ್ ಆಗುತ್ತಿದೆ.
ಹೌದು ವಿಶಾಲ್ ಏಪ್ರಿಲ್ 26ರಂದು ನನ್ನ ಮದುವೆ. ದಯವಿಟ್ಟು ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನ ಕುಸುಮ್(ವಿಶಾಲ್ ‘ಮೇರಿ ಶಾದಿ ಏಪ್ರಿಲ್ 26ಕೋ ಹೈ. ಮುಝೇ ಭಾಗ್ ಕೇ ಲೇ ಜಾನಾ. ತುಮ್ಹಾರಿ ಕುಸುಮ್)… ಎಂದು ಯುವತಿ ನೋಟಿನ ಮೇಲೆ ಬರೆದ ಬರಹವಾಗಿದೆ.
ಪ್ರಿಯಕರನಿಗೆ ಯುವತಿ ನೋಟಿನ ಮೇಲೆ ಪ್ರೇಮ ಸಂದೇಶ ಬರೆದಿರುವ ಪರಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.
ಇಷ್ಟ ಇಲ್ಲದ ಮದುವೆಯಿಂದ ತಪ್ಪಿಸಿಕೊಳ್ಳಲು ಯುವತಿ ಎಲ್ಲಿಗಾದರೂ ನಾವಿಬ್ಬರೂ ಓಡಿಹೋಗೋಣ ಎಂದು ಪ್ರಿಯಕರನಿಗೆ ಸಂದೇಶ ರವಾನಿಸಿದ್ದಾಳೆ.
ಸದ್ಯ ವೈರಲ್ ಆದ ಸಂದೇಶ ವಿಶಾಲ್ ಗೆ ತಲುಪಲಿ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್ ಹೆಸರಿನವರಿಗೆ ಟ್ಯಾಗ್ ಮಾಡಿ. ಅದರಲ್ಲಿ ಯಾರಾದರೂ ಕುಸುಮ್ ರ ಪ್ರಿಯಕರ ಇದ್ದರೆ ಅವರಿಗೆ ಇದು ತಲುಪಲಿ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
21/04/2022 06:45 pm