ತಿರುನಂತಪುರಂ: ಸಾಮಾಜಿಕ ಜಾಲತಾಣಗಳು ಎಷ್ಟರ ಮಟ್ಟಿಗೆ ಪವರ್‌ಫುಲ್ ಅಂದ್ರೆ ಅವು ಎಂತವರನ್ನೂ ಸಡನ್ನಾಗಿ ಮೇಲಕ್ಕೇರಿಸುತ್ತವೆ. ಇನ್ನೂ ಕೆಲವೊಮ್ಮೆ ಪಾತಾಳಕ್ಕೆ ತಳ್ಳಿಬಿಡುತ್ತವೆ.
ಕೂಲಿ ಕಾರ್ಮಿಕನಾಗಿದ್ದ ವೃದ್ಧನೊಬ್ಬ ಒಂದೇ ಒಂದು ಫೋಟೋ ಮೂಲಕ ದಿನಬೆಳಗಾಗುವುದರಲ್ಲಿ ಮಾಡೆಲ್ ಆಗಿದ್ದ. ಈಗ ಅದೇ ಕೇರಳದಲ್ಲಿ ಇನ್ನೊಬ್ಬ ಹುಡುಗಿ ಬಹುಬೇಡಿಕೆಯ ಮಾಡೆಲ್ ಆಗಿದ್ದಾಳೆ.
ಯೆಸ್..ಬೊಗಸೆಕಂಗಳ, ಹಾಲುಗೆನ್ನೆಯ, ಸಂಪಿಗೆ ಮೂಗಿನ ಈ ಹುಡುಗಿ ಈಗ ಕೇರಳದ ಬೇಡಿಕೆಯ ಮಾಡೆಲ್ ಆಗಿದ್ದಾಳೆ. ಬೀದಿ ಬದಿ ಬಲೂನ್ ಮಾರಿಕೊಂಡು ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದ ಈ ಬಾಲೆ ಒಂದು ದಿನ ಫೋಟೋಗ್ರಾಫರ್ ಅರ್ಜು ಕೃಷ್ಣನ್ ಕಣ್ಣಿಗೆ ಬಿದ್ದಿದ್ದಾಳೆ. ಅವರು ಈಕೆಯನ್ನು ಸೀದಾ ತಮ್ಮ ಸ್ಟುಡಿಯೋಗೆ ಕರೆದೊಯ್ದು ಟ್ರೆಡಿಷನಲ್ ಲುಕ್ ಬರುವಂತೆ ಫೋಟೋಶೂಟ್ ಮಾಡಿದ್ದಾರೆ. ಈ ಫೋಟೋಗಳು ವೈರಲ್ ಆಗ್ತಾ ಇದ್ದಂತೆ ಸದ್ಯ ಕಿಸ್ಬು ಎಂಬ ಈ ಹುಡುಗಿ ಬಹುಬೇಡಿಕೆಯ ಮಾಡೆಲ್ ಆಗಿದ್ದಾಳೆ. ಅದೃಷ್ಟ ಹುಡುಕಾಡಿಕೊಂಡು ಬರೋದು ಅಂದ್ರೆ ಇದೇ ಅಲ್ವೇ?
PublicNext
09/03/2022 05:09 pm